ಮನರಂಜನೆಸಿನಿಮಾಸೆಲೆಬ್ರಿಟಿ

ಇನ್ನೂ 30 ವರ್ಷ ಸಿನಿಮಾ ಮಾಡ್ತಿನಿ ಎಂದ ನಟ ಜಗ್ಗೇಶ್

ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಕಾಂಬಿನೇಷನ್​ನ ತೋತಾಪುರಿ ಸಿನಿಮಾ ರಿಲೀಸ್​ಗೂ ಮೊದಲೇ ಬೇಜಾನ್ ಸೌಂಡ್ ಮಾಡ್ತಿದೆ. ಒಂದೇ ಒಂದು ಹಾಡಿನ ಮೂಲಕ ಸಾಕಷ್ಟು ಖ್ಯಾತಿ ಗಳಿಸಿರುವ ತೋತಾಪುರಿ ತಂಡ ಇದೇ ಖುಷಿಯಲ್ಲಿ ಪ್ರೆಸ್ ಮೀಟ್ ಮಾಡಿದ್ದು ಸದ್ಯದಲ್ಲೇ ಸಿನಿಮಾ ರಿಲೀಸ್ ಮಾಡೋಕೆ ರೆಡಿಯಾಗಿದೆ.

ತೋತಾಪುರಿ ಚಿತ್ರದ ಬಾಗ್ಲು ತೆಗಿ ಮೇರಿ ಜಾನ್… ಸ್ವಲ್ಪ ತಡಿ ಮೇರಿ ಜಾನ್, ಚಿಲ್ಕಾ ಟೈಟ್ಟು ಪ್ಯಾರಿ ಜಾನ್ …. ಈ ಹಾಡು ಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಅಂದ್ರೆ ಕಾಮಿಡಿ ಕಿಂಗ್ ಜಗ್ಗೇಶ್ ಸಿನಿ ಕೆರಿಯರ್​ನಲ್ಲಿ ಇಂಥದೊಂದು ಹಿಟ್ ಇದುವರೆಗೂ ನೋಡೆ ಇಲ್ಲವಂತೆ. ಜಗ್ಗೇಶ್ ನಟನೆಯ ಸಿನಿಮಾದ ಹಾಡೊಂದು 9 ಮಿಲಿಯನ್​ಗಿಂತಲೂ ಹೆಚ್ಚು ವೀವ್ಸ್ ಪಡೆದಿರುವುದು ಇದೇ ಮೊದಲು.

ಈ ಬಗ್ಗೆ ಮಾತನಾಡಿದ ನಟ ಜಗ್ಗೇಶ್ ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಮಾಧ್ಯಮದವರು, ಸಾಮಾಜಿಕ ಜಾಲ ತಾಣದ ಗೆಳೆಯರು, ನಮ್ಮ ಸಂಗೀತ ತಂಡ, ಸಂಗೀತ ನಿರ್ದೇಶಕರು, ಹಾಡುಗಾರರು, ಸಂಗೀತ ಸಂಯೋಜಕರು ಎಲ್ಲರಿಗೂ ಧನ್ಯವಾದ. ನನ್ನ ವೃತ್ತಿ ಜೀವನದಲ್ಲಿ ಈ ರೀತಿಯ ಯಶಸ್ಸನ್ನು ನಾನು ನೋಡಿರಲಿಲ್ಲ. ನನ್ನ ಸಿನಿಮಾದ ಹಾಡುಗಳು ಹಿಟ್ ಆಗುತ್ತಿದ್ದವು. ಜನ ಇಷ್ಟಪಡುತ್ತಿದ್ದರು. ಆದ್ರೆ ಈ ಹಾಡು 8,9 ಮಿಲಿಯನ್ ಗಟ್ಟಲೆ ವೀವ್ಸ್ ಆಗಿದೆ ಎಂದರು.

ಒಂದು ಹಿಟ್ ಸಿನಿಮಾ ಒಬ್ಬ ನಟನನ್ನು ಹತ್ತು ವರ್ಷ ಉದ್ಯಮದಲ್ಲಿ ಇರುವಂತೆ ಮಾಡುತ್ತದೆ. ನನಗೆ ತೋತಾಪುರಿ ಸೇರಿದಂತೆ ಮೂರು ಅತ್ಯುತ್ತಮ ಸಿನಿಮಾಗಳು ಸಾಲಿನಲ್ಲಿವೆ. ಈ ಮೂರು ಸಿನಿಮಾಗಳು ಸಹ ಹಿಟ್ ಆಗಲಿವೆ. ಹಾಗಾಗಿ ನಾನು ಇನ್ನೂ ಮೂವತ್ತು ವರ್ಷ ಚಿತ್ರರಂಗದಲ್ಲಿ ಇರುತ್ತೇನೆ. ಮುಂದಿನ ವರ್ಷ ನನಗೆ 60 ವರ್ಷ ವಯಸ್ಸಾಗುತ್ತದೆ. ಅಲ್ಲಿಗೆ ನನಗೆ 90 ವರ್ಷ ಆಗುವವರೆಗೆ ನಟಿಸುತ್ತಲೇ ಇರುತ್ತೇನೆ ಎಂದರು ಜಗ್ಗೇಶ್.

Spread the love

Related Articles

Leave a Reply

Your email address will not be published. Required fields are marked *

Back to top button