ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರದಿಂದ ರಚಿತಾ ರಾಮ್ ಹೊರಗೆ

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸಿನಿಮಾ ಅಂದರೆ ಸಾಕು ನಾ ಮುಂದೆ ತಾ ಮುಂದೆ ಎಂದು ಹೇಳುವರೇ ಜಾಸ್ತಿ . ಅವರ ಸಿನಿಮಾದಲ್ಲಿ ಅಭಿನಯಿಸುವುದಕ್ಕೆ ಅದೆಷ್ಟೋ ನಟ- ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ. ಸದ್ಯ ಅವರು ನಿರ್ದೇಶಿಸಿರುವ ಬಹು ನಿರೀಕ್ಷಿತ ಸಿನಿಮಾ ಗಾಳಿಪಟ-2 ಶೂಟಿಂಗ್ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ನಡುವೆ ಯೋಗರಾಜ್ ಭಟ್ ನಿರ್ದೇಶನದ ಮತ್ತೊಂದು ಹೊಸ ಸಿನಿಮಾ ಗರಡಿ ಕೆಲವು ದಿನಗಳ ಹಿಂದೆ ಅನೌನ್ಸ್ ಮಾಡಿದ್ದರು. ಈ ಸಿನಿಮಾಗೆ ಕೌರವ ಬಿ.ಸಿ.ಪಾಟೀಲ್ ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದ ನಾಯಕನಾಗಿ ಯಶಸ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಸದ್ದಿಲ್ಲದೇ ಶುರುವಾಗುತ್ತಿತ್ತು. ಆದರೆ ಈಗ ಈ ಚಿತ್ರದಿಂದ ಒಂದು ಸುದ್ದಿ ಹೊರಗೆ ಬಿದ್ದಿದೆ. ಅದು ಏನಾಪ್ಪ ಅಂದರೆ ಈ ಚಿತ್ರದಿಂದ ರಚಿತಾ ರಾಮ್ ಹೊರಗೆ ನಡೆದಿದ್ದಾರೆ.
ಹೌದು ಗರಡಿ ಸಿನಿಮಾಗೆ ನಾಯಕಿಯಾಗಿ ರಚಿತಾ ರಾಮ್ ಆಯ್ಕೆಯಾಗಿದ್ದರು. ಇದೀಗ ಅವರು ಕಾರಣಾಂತರದಿಂದ ಚಿತ್ರದಿಂದ ಹೊರಗೆ ಬಂದಿದ್ದಾರೆ.
ಅಂದಹಾಗೆ ರಚಿತಾರಾಮ್ ಗೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಬೇಡಿಕೆ ಇದೆ. ಸದ್ಯ ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಹೀಗಾಗಿ ಗರಡಿ ಚಿತ್ರಕ್ಕೆ ಡೇಟ್ಸ್ ಹೊಂದಾಣಿಕೆ ಆಗಿಲ್ಲ ಎಂಬ ಕಾರಣಕ್ಕೆ ಗರಡಿ ತಂಡದಿಂದ ಹೊರಬಂದಿದ್ದಾರೆ.ಈಗ ಅವರ ಜಾಗಕ್ಕೆ ಮತ್ತೊಂದು ನಾಯಕಿ ಎಂಟ್ರಿಕೊಟ್ಟಿದ್ದಾರೆ.
ಹೌದು ನಟಿ ರಚಿತಾ ರಾಮ್ ಅವರ ಜಾಗಕ್ಕೆ ಸೋನಾಲ್ ಮೊಂತೆರೋ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಅವರು ಪಂಚತಂತ್ರ ಸಿನಿಮಾದ ಮೂಲಕ ಹಾಟ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದಿದ್ದರು. ಈ ವಾರದಲ್ಲಿ ಗರಡಿ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಇದೊಂದು ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದ್ದು, ಚಿತ್ರವನ್ನು ನಿರ್ಮಿಸುತ್ತಿರುವ ಬಿ.ಸಿ. ಪಾಟೀಲ್, ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.




