
ಬಿಟೌನ್ ಬೆಡಗಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಸದ್ಯ ಎಂಜಾಯ್ ಮೂಡ್ ನಲ್ಲಿದ್ದಾರೆ. ಸದ್ಯ ದಂಪತಿ ಬೀಚ್ ನಲ್ಲಿ ಸಮಯ ಕಳೆಯುತ್ತಿದ್ದಾರೆ. ಸಿನಿಮಾ ಕೆಲಸಗಳಿಂದ ಸ್ವಲ್ಪ ಬಿಡುವು ಪಡೆದುಕೊಂಡಿದ್ದು, ಇಬ್ಬರು ರಿಲ್ಯಾಕ್ಸ್ ಆಗಿ ಬೀಚ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿ ಅವರು ರೊಮ್ಯಾಂಟಿಕ್ ಆಗಿ ಹಾಟ್ ಆಗಿರೋ ಫೋಟೋ ಗಳನ್ನು ಶೇರ್ ಮಾಡಿದ್ದಾರೆ.

ಹೌದು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ರಜೆಯನ್ನು ಬೀಚ್ ನಲ್ಲಿ ಕಳೆಯುತ್ತಿದ್ದಾರೆ. ಆ ಬೀಚ್ ನಲ್ಲಿ ಅವರಿಬ್ಬರು ಚುಂಬಿಸುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ದೀಪಿಕಾ ವೈಟ್ ಶರ್ಟ್ ಧರಿಸಿದ್ದರೆ, ಇನ್ನು ರಣವೀರ್ ಸಿಂಗ್ ಅವರು ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ ದೀಪಿಕಾ ಪಡುಕೋಣೆ ಅಭಿನಯದ ಗೆಹರಾಯಿಯಾ ಶೀರ್ಷಿಕೆ ಗೀತೆ ಡೂಬೆಯ ಸಾಹಿತ್ಯದೊಂದಿಗೆ ಈ ಪೊಸ್ಟ್ ಆರಂಭವಾಗುತ್ತಿದೆ.




