Latestಮನರಂಜನೆಸಿನಿಮಾಸೆಲೆಬ್ರಿಟಿ

ಪವರ್ ಸ್ಟಾರ್ ನಟನೆಯ ಪವರ್ ಫುಲ್ ‘ಜೇಮ್ಸ್’ ಟೀಸರ್

ಅಪ್ಪು ಅಗಲಿಕೆ ನೋವಿನಲ್ಲಿರೋ ಅಭಿಮಾನಿಗಳಿಗೆ ಮರುಳು ಗಾಡಿನಲ್ಲಿ ನೀರು ಸಿಕ್ಕಂತಾಗಿದೆ. ಸಾಕಷ್ಟು ದಿನದಿಂದ ಚಾತಕ ಪಕ್ಷಿಗಳಂತೆ ಕಾಯ್ತಿದ್ದವರಿಗೆ ಜೇಮ್ಸ್ ಟೀಸರ್ ಕೊಂಚ ಮಟ್ಟಿಗಿನ ಖುಷಿ ನೀಡಿದೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆದ ಬಳಿಕ ಟೀಸರ್ ನೋಡೋಕೆ ಕಾಯ್ದಿದ್ದವ್ರಿಗೆ ಚಿತ್ರತಂಡ ಅದ್ದೂರಿಯಾದ ಟೀಸರನ್ನೇ ಕೊಟ್ಟಿದೆ.

ಪುನೀತ್ ರಾಜ್​ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಪುನೀತ್ ನಟನೆಯ ಕೊನೆಯ ಸಿನಿಮಾವನ್ನ ಕಣ್ಮುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ಸಿನಿಮಾ ರಿಲೀಸ್ ಮಾಡೋಕೆ ಚಿತ್ರತಂಡ ಮುಂದಾಗಿದ್ದು ಅದಕ್ಕೆ ಭರದಿಂದ ತಯಾರಿ ಕೂಡ ನಡೆಯುತ್ತಿದೆ.

ಟೀಸರ್​ನ ಆರಂಭದಲ್ಲಿ ಅಂಡರ್​ ವರ್ಲ್ಡ್ ಹಾಗೂ ಮಾಫಿಯಾ ದೃಶ್ಯಗಳನ್ನ ತೋರಿಸಲಾಗಿದ್ದು, ಬಳಿಕ ಬೈಕ್​ನಲ್ಲಿ ಎಂಟ್ರಿಕೊಡುವ ಅಪ್ಪು ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಪುನೀತ್ ಕಾರಿನಿಂದ ಇಳಿಯುವ ದೃಶ್ಯ, ಗನ್ ಹಿಡಿಯುವ ಸ್ಟೈಲ್, ಸ್ಟಂಟ್ ದೃಶ್ಯಗಳನ್ನ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.

ಟೀಸರ್​ನಲ್ಲಿ ಪವರ್ ಸ್ಟಾರ್ ಪವರ್ ಫುಲ್ ಡೈಲಾಗ್​ ಜೊತೆಗೆ ಪವರ್ ಫುಲ್ ಎಂಟ್ರಿಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಾಲಿವುಡ್ ರೇಂಜ್​ನಲ್ಲಿ ಚಿತ್ರದ ಟೀಸರ್ ಮೂಡಿ ಬಂದಿದ್ದು ಕೊನೆಯಲ್ಲಿ ಕೇಳಿಸೋ ಶೀವಣ್ಣ ವಾಯ್ಸ್ ಚಿತ್ರಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ.

ಪುನೀತ್ ರಾಜ್​ಕುಮಾರ್ ಹಾಗೂ ಚೇತನ್ ಕುಮಾರ್ ಕಾಂಬಿನೇಷನ್​ನ ಜೇಮ್ಸ್ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರಲಿದೆ. ಸದ್ಯ ಜೇಮ್ಸ್ ಟೀಸರ್ ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಅಶ್ವಿನಿ ಪುನೀತ್ ರಾಜ್​ಕುಮಾರ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಟೀಸರ್ ಶೇರ್ ಮಾಡಿದ್ದಾರೆ.

ಟೀಸರ್‍ನಲ್ಲಿ ಮೊದಲಿಗೆ ಅಂಡರ್ ವರ್ಲ್ಡ್, ಮಾಫಿಯಾ ದೃಶ್ಯಗಳು ಮೂಡಿಬಂದಿದ್ದು, ನಂತರ ಬೈಕ್ ಮೇಲೆ ಎಂಟ್ರಿ ಕೊಡುವ ಪುನೀತ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಪುನೀತ್ ಕಾರಿನಿಂದ ಇಳಿಯುವ ದೃಶ್ಯ, ಗನ್ ಹಿಡಿಯುವ ಸ್ಟೈಲ್, ಪುನೀತ್ ಸ್ಟಂಟ್ಸ್ ಸಿನಿಮಾದಲ್ಲಿ ಬಹಳ ಅದ್ಭುತವಾಗಿ ಮೂಡಿಬಂದಿದೆ. ಇನ್ನೂ ಟೀಸರ್‌ನ ಕೊನೆಯಲ್ಲಿ ನನಗೆ ಮೊದಲಿನಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಎಂಬ ಶಿವಣ್ಣನ ವಾಯ್ಸ್ ಟೀಸರ್ ಮತ್ತಷ್ಟು ರಿಚ್ ಗೊಳಿಸಿದೆ. ಒಟ್ಟಾರೆ ಜೇಮ್ಸ್ ಟೀಸರ್ ಒಂದು ರೀತಿ ಹಾಲಿವುಡ್ ರೇಂಜ್‍ನಲ್ಲಿ ಮೂಡಿಬಂದಿದೆ ಎಂದರೆ ತಪ್ಪಾಗಲಾರದು.

Spread the love

Related Articles

Leave a Reply

Your email address will not be published. Required fields are marked *

Back to top button