Breaking NewsLatestಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

ಪಂಚಮಸಾಲಿ ಪೀಠದ ಬಗ್ಗೆ ಮಾತನಾಡೋರು ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ್ ನಿರಾಣಿ

ಕಲಬುರಗಿ : ಪಂಚಮಸಾಲಿ ಮೂರನೇ ಪೀಠದ ಬಗ್ಗೆ ಮಾತನಾಡೋರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳಗೆ ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ತೀರುಗೇಟು ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಪೀಠ ಯಾರ ವಿರುದ್ಧವಾಗಿ ಪ್ರಾರಂಭವಾಗುತ್ತಿಲ್ಲ, ನಿರಾಣಿ ಹಿತಾಸಕ್ತಿಗೆ ಮೂರನೇ ಪೀಠ ಸ್ಥಾಪನೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಪಂಚಮಸಾಲಿ ಮೂರನೇ ಪೀಠದ ಬಗ್ಗೆ ಮಾತನಾಡೋರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಎರಡನೇ ಪೀಠ ಏಕೆ ಹುಟ್ಟಿತು ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

ಮೂರನೇ ಪೀಠದ ಕಾರ್ಯಕ್ರಮಕ್ಕೆ ಅನೇಕ ಸ್ವಾಮೀಜಿಗಳು ಬರ್ತಿದ್ದಾರೆ. ಕೂಡಲಸಂಗಮ ಪೀಠದ ಸ್ವಾಮೀಜಿಗೆ ಕೂಡಾ ಆಹ್ವಾನ ನೀಡಲಾಗಿದೆ. ಅವರು ಬರ್ತಾರೋ ಇಲ್ಲವೋ ಗೊತ್ತಿಲ್ಲಾ ಅಂತ ಹೇಳಿದರು.

ಇನ್ನು ಹಿಜಾಬ್ ವಿಚಾರ ಸದ್ಯ ಕೋರ್ಟ್‌ನಲ್ಲಿದೆ. ನ್ಯಾಯಾಲಯದ ಆದೇಶ ಎಲ್ಲರು ಪಾಲನೆ ಮಾಡಬೇಕು ಎಂದು ಹೇಳಿರುವ ನಿರಾಣಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ಇಲ್ಲಾ, ಅದು ಸಿಎಂ ಅವರ ಪರಮಾಧಿಕಾರ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button