ಮನರಂಜನೆಸಿನಿಮಾಸೆಲೆಬ್ರಿಟಿ
ರೆಟ್ರೋ ಲುಕ್ನಲ್ಲಿ ಅಚ್ಯುತ್ ಕುಮಾರ್ ಕಮಾಲ್

ಟೈಟಲ್ ಮೂಲಕ ಸಿನಿಮಾ ರಂಗದಲ್ಲಿ ಕುತೂಹಲ ಕೆರಳಿಸಿರೋ ಚಿತ್ರ ಫೋರ್ ವಾಲ್. ಇದುವರೆಗೂ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದ ನಟ ಅಚ್ಯುತ್ ಕುಮಾರ್ ಇದೇ ಮೊದಲ ಬಾರಿಗೆ ಫೋರ್ ವಾಲ್ ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ.
ಮಂತ್ರ ಸಿನಿಮಾದ ಮೂಲಕ ಚಂದನವನಕ್ಕೆ ಡೈರೆಕ್ಟರ್ ಆಗಿ ಎಂಟ್ರಿಕೊಟ್ಟಿದ್ದ ಎಸ್.ಎಸ್.ಸಜ್ಜನ್ ಫೋರ್ ವಾಲ್ಸ್ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪಕ್ಕ ಫ್ಯಾಮಿಲಿ ಎಂಟಟೈನರ್ ಚಿತ್ರವಾಗಿರೋ ಫೋರ್ ವಾಲ್ ನಲ್ಲಿ ಅಚ್ಯುತ್ ಕುಮಾರ್ ಮೂರು ಶೇಡ್ನಲ್ಲಿ ಬಣ್ಣ ಹಚ್ಚಿದ್ದಾರೆ.
ಇತ್ತೀಚೆಗೆ ಚಿತ್ರದ ಹಾಡೊಂದು ರಿಲೀಸ್ ಹಾಕಿದ್ದು ಕೇಳುಗರನ್ನ ಮತ್ತೆ ಮತ್ತೆ ಕೇಳುವಂತೆ ಮಾಡಿದೆ. 90ರ ದಶಕದ ನವ ಯುವಕರ ನಿಷ್ಕಲ್ಮಶ ಪ್ರೀತಿಯನ್ನ ಈ ಹಾಡಿನ ಮೂಲಕ ಕಟ್ಟಿಕೊಡಲಾಗಿದ್ದು ಅಚ್ಯುತ್ ಕುಮಾರ್ಗೆ ಜೋಡಿಯಾಗಿ ಡಾ.ಪವಿತ್ರ ಕಾಣಿಸಿಕೊಂಡಿದ್ದಾರೆ.
ಅಚ್ಯುತ್ ಕುಮಾರ್ರ ರೆಟ್ರೋ ಲುಕ್ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು, ಇದೇ ಫೆಬ್ರವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.




