ಗ್ಯಾಸ್ ಪೈಪ್ ಲೈನ್ ಅಳವಡಿಕೆ ವಿಚಾರ ಇದು ಖಾಸಗೀಕರಣ ಮಾಡುವ ಹುನ್ನಾರ: ಎಂ ಲಕ್ಷ್ಮಣ್

ಮೈಸೂರು : ಮೈಸೂರು ನಗರದಲ್ಲಿ ಗ್ಯಾಸ್ ಪೈಪ್ ಲೈನ್ ಪೈಪ್ ಅಳವಡಿಕೆ ವಿಚಾರದಲ್ಲಿ ಗೊಂದಲಗಳಿವೆ. ಕೇಂದ್ರ ಸರ್ಕಾರ 17 ಖಾಸಗಿ ಕಂಪನಿಗೆ ಟೆಂಡರ್ ಕೊಟ್ಟಿದೆ. ಇದು ಖಾಸಗೀಕರಣ ಮಾಡುವ ಹುನ್ನಾರ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಗ್ಯಾಸ್ ಸಿಲಿಂಂಡರ್ ಗೆ ಸಬ್ಸಿಡಿ ಕೊಡಲಾಗುತ್ತಿತ್ತು. ಈಗ ಬಿಜೆಪಿ ಇದನ್ನು ಸ್ಥಗಿತ ಗೊಳಿಸಿದೆ. ಗ್ಯಾಸ್ ಬೆಲೆ 340 ಇದ್ದಿದ್ದು ಈಗ 1000 ರೂ ಆಗಿದೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೂ ಸಬ್ಸಿಡಿ ಕೊಡಲು ಆಗಬಾರದು ಎಂಬುದೇ ಬಿಜೆಪಿಯವರ ಅಜೆಂಡಾ ಎಂದು ಕಿಡಿಕಾರಿದರು.
ಈಗ ಪೈಪ್ ಲೈನ್ ಮೂಲಕ 500 ರೂಪಾಯಿಗೆ ಗ್ಯಾಸ್ ನೀಡುತ್ತೇವೆ ಎಂಬುದು ಶುದ್ಧ ಸುಳ್ಳು. ಪ್ರತಿ ಮನೆಗೆ ಪ್ರಾರಂಭದಲ್ಲಿ 7154 ರೂ. ಕಟ್ಟಬೇಕು. ಇದನ್ನು ಪ್ರತಾಪ್ ಸಿಂಹ ಮರೆಮಾಚಿದ್ದಾರೆ. ಜೊತೆಗೆ ಗ್ಯಾಸ್ ಬಿಲ್ ಕಟ್ಟದಿದ್ದರೆ ತಾತ್ಕಾಲಿಕ ತಡೆಗೆ ಹಣ ಕಟ್ಟಬೇಕು. ಮತ್ತೆ ಕನೆಕ್ಷನ್ ಬೇಕಿದ್ದರೆ ಅದಕ್ಕೂ ಹಣ ಕಟ್ಟಬೇಕು. ತಿಂಗಳ ಮಿನಿಮಮ್ ಬಿಲ್ ಕೊಡಲು 50 ರೂ. ಜಾರ್ಜ್ ಮಾಡಲಾಗುತ್ತೆ. ಒತ್ತಡದಿಂದ ಕಲೆಕ್ಷನ್ ಕಟ್ ಮಾಡಿದರೆ ಅದಕ್ಕೂ ಹಣ ಕಟ್ಟಬೇಕು ಎಂದರು.
ಹೀಗೆ ಇನ್ನೂ ಅನೇಕ ರೀತಿಯಲ್ಲಿ ಹಣ ಸುಲಿಗೆ ಮಾಡಲಾಗುವುದು ಪ್ರತಾಪ್ ಸಿಂಹ ಇದನ್ನು ಯಾಕೆ ಹೇಳುತ್ತಿಲ್ಲ. ಇದು ಮೋದಿಯವರ ಕನಸಿನ ಪ್ರಾಜೆಕ್ಟ್ ಅಂತೀರಿ, ಇದು ಮೋದಿ ಕನಸಿನ ಪ್ರಾಜೆಕ್ಟ್ ಅಲ್ಲ. ಖಾಸಗಿಯವರ ಕಮಿಷನ್ ಪೆಟ್ ಪ್ರಾಜೆಕ್ಟ್ ಬರೀ ಸುಳ್ಳು ಹೇಳಬೇಡಿ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ದ ಲಕ್ಷ್ಮಣ್ ಕಿಡಿಕಾರಿದರು.
