ಮನರಂಜನೆಸಿನಿಮಾಸೆಲೆಬ್ರಿಟಿ

ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಆದಿಕೇಶವಲು ಮೊಮ್ಮಗ: ಸರ್ಕಾರ ಕ್ರಮ ಕೈಗೊಳ್ಳುತ್ತ ಎಂದ ನಟಿ ರಮ್ಯಾ?

ಜನವರಿ 26ರ ಸಂಜೆ 6.15ರ ಸುಮಾರಿಗೆ ಜಯನಗರದ 1ನೇ ಬ್ಲಾಕ್​ನಲ್ಲಿ ರಸ್ತೆ ಬದಿ ಮಲಗಿದ್ದ ಬೀದಿ ನಾಯಿ ಮೇಲೆ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಕಾರು ಹತ್ತಿಸಿದ್ದರು. ಶ್ವಾನದ ಮೇಲೆ ದರ್ಪ ತೋರಿದ ಆದಿಕೇಶವಲು ಮೊಮ್ಮಗನ ವಿರುದ್ಧ ಆಕ್ರೋಶ ಕೇಳಿ ಬಂದಿದೆ. ಈತನ ವರ್ತನೆಗೆ ನಟ, ನಟಿಯರು ಆಕ್ರೋಶ ಹೊರ ಹಾಕಿದ್ದು ಇದೀಗ ನಟಿ ರಮ್ಯಾ ಆದಿಕೇಶವಲು ಮೊಮ್ಮಗನಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸ್ಯಾಂಡಲ್​ವುಡ್ ನಟಿ ರಮ್ಯಾ ಟ್ವೀಟ್ ಮಾಡಿದ್ದು ಈ ವಿಡಿಯೋ ನೋಡಿದಾಗ ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಸರ್ಕಾರ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುತ್ತಾ, ಇಲ್ಲ ಒತ್ತಡಕ್ಕೆ ಮಣಿಯುತ್ತಾ ಎನ್ನುವುದನ್ನ ಕಾದು ನೋಡೋಣ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರ್ ಅಶೋಕ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಕಳೆದ ಶನಿವಾರ KA 51 ME 0045 ನಂಬರ್​ನ ಆಡಿ ಕಾರಿನಲ್ಲಿ ಬಂದ ಉದ್ಯಮಿ ಆದಿಕೇಶವಲು ಮೊಮ್ಮಗ ಬೀದಿ ಬದಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿದ್ದಾರೆ. ಈತನ ಹುಚ್ಚಾಟಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬರ್ತಿದ್ದು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.ಜಯನಗರದ ನಿವಾಸಿ ಎಂ.ಎಸ್.ಭದ್ರಿಪ್ರಸಾದ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಆದಿ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡು ತನಿಕೆ ಕೈಗೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button