
ಬಿಹಾರ: ಕಳ್ಳರು ತಮ್ಮ ಕೆಲಸ ಆಗಬೇಕು ಅಂದರೆ ಏನ್ ಮಾಡೋಕೂ ಹೇಸಲ್ಲ. ಏನಾದ್ರು ಕಳ್ಳತನ ಮಾಡಬೇಕು ಅಂದ್ರೆ ಸಾಕು ನಾನಾ ರೀತಿ ಸಂಚು ರೂಪಿಸುತ್ತಾರೆ. ಅದೇ ರೀತಿ ಇಲ್ಲೊಂದು ಊರಿನಲ್ಲಿ ಕಳ್ಳರು ದೇವಸ್ಥಾನದಲ್ಲಿದ್ದ ವಸ್ತುಗಳನ್ನು ಕಳ್ಳತನ ಮಾಡುವುದಕ್ಕೆ ಸಖತ್ ಪ್ಲಾನ್ ಮಾಡಿದ್ದಾರೆ.
ಹೌದು ಬಿಹಾರದ ಕೈಮೂರ್ ನಲ್ಲಿ ದೇವಸ್ಥಾನವನ್ನು ದರೋಡೆ ಮಾಡುವ ಮೊದಲು ಕಳ್ಳರು 7 ಬೀದಿ ನಾಯಿಯನ್ನು ಕೊಂದಿದ್ದಾರೆ. ಕಳ್ಳರು ಬೀದಿ ನಾಯಿಗಳಿಗೆ ವಿಷ ಉಣಿಸಿ ನಂತರ ದೇವಸ್ಥಾನದ ಬಾಗಿಲನ್ನು ಒಡೆದಿದ್ದಾರೆ. ನಂತರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ 15,000 ರೂ.ಗಳನ್ನು ಕದ್ದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಳಗ್ಗೆ ದೇವಸ್ಥಾನಕ್ಕೆ ಅರ್ಚಕರು ಬಂದ ನಂತರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸೂಕ್ತ ತನಿಖೆ ನಡೆಸುತ್ತಿದ್ದಾರೆ.



