Breaking Newsಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡದಲ್ಲಿ ಮನೆ ದೊಚಿದ ಕಳ್ಳರು : ನಗದು, ಚಿನ್ನ ಕದ್ದು ಪರಾರಿ

ಧಾರವಾಡ : ಮನೆಯಲ್ಲಿ ಯಾರು ಇಲ್ಲದನ್ನು ನೋಡಿಕೊಂಡ ಕಳ್ಳರು, ಹಾಡು ಹಗಲೇ ಮನೆಯೊಂದಕ್ಕೆ ನುಗ್ಗಿ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಧಾರವಾಡದ ಚಾಲುಕ್ಯ ನಗರದಲ್ಲಿ ನಡೆದಿದೆ.

ನಗರದ ಶೆಟ್ಟರ್ ಕಾಲೋನಿಯ ಚಾಲುಕ್ಯ ನಗರದಲ್ಲಿ ಕಳ್ಳರು ವಿನಾಯಕ ಪಾಟೀಲರವರ ಮನೆಯಲ್ಲಿ ಕಳ್ಳರು ತಮ್ಮ ಕೈಚಳ ತೋರಿಸಿದ್ದಾರೆ. ಮುಂಜಾನೆಯ ಮನೆಯ ಸದಸ್ಯರೆಲ್ಲರು ಹೊರಗಡೆ ತೆರಳಿದ್ದರು. ನಂತರ ಮನೆಗೆ ಮರಳಿದ್ದಾಗ, ಮನೆಯ ಮುಖ್ಯ ದ್ವಾರದ ಲಾಕರ್ ತೆಗೆಯಲು ಮುಂದಾದಾಗ ಕಳ್ಳರ ಕೃತ್ಯ ತಿಳಿದು ಬಂದಿದೆ.

ಮನೆಯ ಒಳಗೆ ಹೋಗಿ ನೋಡಿದಾಗ ಟ್ರಜೂರಿಯ ಬೀಗ ಮುರಿದು, ನಾಲ್ಕು ತೊಲೆ ಚಿನ್ನ, 1 ಲಕ್ಷದ 50 ಸಾವಿರ ನಗದನ್ನು ಕದ್ದುಕೊಂಡು ಹೋಗಿದ್ದಾರೆ.

ಕಳೆದೆರಡು ವರ್ಷಗಳಿಂದ ಮನೆಯನ್ನು ಬೋಗ್ಯಕ್ಕೆ ಪಡೆದುಕೊಂಡು ವಾಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಇಲ್ಲಿ ಯಾರೊಬ್ಬರ ಮನೆಯು ಕಳ್ಳತನವಾಗಿಲ್ಲ. ಈ ಓಣಿಯಲ್ಲಿ ನಮ್ಮ ಮನೆ ಕೊನೆಯದಾಗಿದ್ದು, ನಮ್ಮನ್ನು ಹತ್ತಿರದಿಂದ ನೋಡಿಕೊಂಡೇ ಕಳ್ಳರೇ ಈ ಕೃತ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ಘಟನೆಯ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಮನೆಯ ಮಾಲೀಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Spread the love

Related Articles

Leave a Reply

Your email address will not be published. Required fields are marked *

Back to top button