Breaking NewsLatestರಾಜ್ಯರಾಷ್ಟ್ರೀಯಸುದ್ದಿ

ರಾಜ್ ಪಥ್ ನಲ್ಲಿ ಸೇನಾಶಕ್ತಿಯ ಬೃಹತ್ ಅನಾವರಣ

ನವದೆಹಲಿ: ದೆಹಲಿಯಲ್ಲಿ ಮಾಗಿಯ ಚಳಿಯ ನಡುವೆ 73 ನೇ ಗಣರಾಜ್ಯೋತ್ಸವ ಸಂಭ್ರಮ ಗರಿಕೆದರಿದೆ. ಸ್ವಾತಂತ್ರದ ಅಮೃತ ಮಹೋತ್ಸವದ ಹೊಸ್ತಿಲಲ್ಲಿ ದೇಶದ ಸೇನಾಶಕ್ತಿಯ ಅನಾವರಣಗೊಳಿಸುವ ವೈಭವದ ಪೆರೇಡ್ ರಾಜ ಪತ್ ನಲ್ಲಿ ಜರುಗಿತು. ರಾಷ್ಟ್ರಗೀತೆ ಮೊಳಗುತ್ತಿದ್ದಂತೆಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು.

ಇದರ ಅಂಗವಾಗಿ 21 ಕುಶಾಲ ತೋಪು ಹಾರಿಸಲಾಯಿತು. ಭಾರತೀಯ ವಾಯುಪಡೆಯ 75 ವಿಮಾನಗಳು ಭಾನಂಗಣದಲ್ಲಿ ಚಿತ್ತಾರ ಮೂಡಿಸಿದವು . ರಾಜಪಥ್ ಎರಡು ಕಡೆ ದೊಡ್ಡ ದೊಡ್ಡ ಪರದೆಯ ಟಿವಿಯನ್ನು ಅಳವಡಿಸಲಾಗಿತ್ತು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದೇ ಜನವರಿ 23 ರಂದೇ ಗಣರಾರಾಜ್ಯೋತ್ಸವ ಕಾರ್ಯಕ್ರಮಗಳು ವಿಧಿವತ್ತಾಗಿ ಆರಂಭವಾಗಿದೆ
ರಕ್ಷಣಾಪಡೆಯ 384 ಬಂದಿಗೆ ಶೌರ್ಯ ಪ್ರಶಸ್ತಿ ಹಾಗೂ 128 ಕೇಂದ್ರ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ.

12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ದ ಚಿತ್ರಗಳು ವೈಭವದ ರಾಜಪತ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದವು. ಗಣರಾಜ್ಯ ದಿನದ ಅಂಗವಾಗಿ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.

ಕೋವಿಡ್ ಕಾರಣದಿಂದಾಗಿ ಯಾವುದೇ ವಿದೇಶಿ ಗಣ್ಯ ಅತಿಥಿ ಪರೇಡ್ ನಲ್ಲಿ ಭಾಗಿಯಾಗಿರಲಿಲ್ಲ ಮೂರು ಗಂಟೆಯ ಪೆರೇಡ್ ನಲ್ಲಿ ಸೇನಾಶಕ್ತಿಯ ಅನಾವರಣ, ಮತ್ತು ದೇಶದ ಸಾಂಸ್ಕೃತಿಕ ಹಿರಿಮೆ ಗರಿಮೆ ಪ್ರತಿ ಬಿಂಬಿಸಲಾಯಿತು.

ಪ್ರೇಕ್ಷಕರ ಸಂಖ್ಯೆಯನ್ನು ಸಹ ಕೋವಿಡ್ ಕಾರಣದಿಂದ 7- 8ಸಾವಿರ ಜನಕ್ಕೆ ಸೀಮಿತ ಮಾಡಲಾಗಿದೆ.1965 ಮತ್ತು 1971 ರ ಭಾರತ-ಪಾಕ್ ಯುದ್ಧಗಳಲ್ಲಿ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಪ್ರದರ್ಶನಗೊಂಡಿದ್ದವು ಇದರ ಜೊತೆಗೆ ಹಳೆಯ ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿಗಳುಪೆರೆಡ್ ನಲ್ಲಿಸಾಗಿದವು.

ಮೊದಲ ಬಾರಿಗೆ 75 ಮೀಟರ್ ಉದ್ದ ಮತ್ತು 15 ಅಡಿ ಎತ್ತರದ 10 ಸ್ಕ್ರಾಲ್ಗಳನ್ನು ರಾಜಪಥದಲ್ಲಿ ಪ್ರದರ್ಶಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಕೊಂಡ ಕಾಶ್ಮೀರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಾಬುರಾಮ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಬಾಬು ರಾಮ್ ಪತ್ನಿ ಮಗ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button