ಆಹಾರಲೈಫ್ ಸ್ಟೈಲ್

ಸುಲಭವಾಗಿ ತಯಾರಿಸಿ ಬೇಬಿ ಕಾರ್ನ್ ಮಂಚೂರಿ

ಮಳೆಗಾಲ ಮತ್ತು ಚಳಿಗಾಲದಲ್ಲಿ ಏನಾದ್ರೂ ಬಿಸಿ ಬಿಸಿ ಸವಿಬೇಕು ಅನಿಸುತ್ತೆ. ಆಗಾ ಬೇಬಿ ಕಾರ್ನ್ ಚಿಲ್ಲಿ ಅಥವಾ ಬೇಬಿ ಕಾರ್ನ್ ಮಂಚೂರಿ ಎಲ್ಲರಿಗೂ ಇಷ್ಟವಾಗುತ್ತೆ.

ಗೋಬಿ ಮಂಚೂರಿಗಿಂತಲೂ ಬೇಬಿ ಕಾರ್ನ್ ತುಂಬಾ ರುಚಿಕರ. ಇದನ್ನು ರೆಡಿ ಮಾಡಿಕೊಟ್ಟರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಲ್ಲ ಮಕ್ಕಳು ಇದನ್ನು ಇಷ್ಟ ಪಡುತ್ತಾರೆ. ಹಾಗಾದರೆ ಒಮ್ಮೆ ಮನೆಯಲ್ಲೇ ಬೇಬಿ ಕಾರ್ನ್ ಮಂಚೂರಿ ಟ್ರೈ ಮಾಡಿ ನೋಡಿ. ಅದು ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು
ಬೇಬಿ ಕಾರ್ನ್ – 12
ಮೈದಾಹಿಟ್ಟು – 4 ಚಮಚ
ಜೋಳದ ಹಿಟ್ಟು – 2 ಚಮಚ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಕೆಂಪು ಮೆಣಸಿನ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಸಾಲ ಪದಾರ್ಥಗಳು
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಈರುಳ್ಳಿ – 1
ದೊಡ್ಡ ಮೆಣಸಿನಕಾಯಿ – 1
ಹಸಿಮೆಣಸಿನಕಾಯಿ – 2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಈರುಳ್ಳಿ ಸೊಪ್ಪು – ಸ್ವಲ್ಪ
ಕೆಂಪು ಮೆಣಸಿನಕಾಯಿ ಪುಡಿ – 1 ಚಮಚ
ಚಿಲ್ಲಿ ಸಾಸ್ – 1 ಚಮಚ
ಸೋಯಾ ಸಾಸ್ – 2 ಚಮಚ
ಜೋಳದ ಹಿಟ್ಟು – ಅರ್ಧ ಬಟ್ಟಲು
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ…

ನೀರನ್ನು ಚೆನ್ನಾಗಿ ಕುದಿಸಿಕೊಂಡು ಅದಕ್ಕೆ ಕತ್ತರಿಸಿಕೊಂಡ ಬೇಬಿ ಕಾರ್ನ್ ಹಾಕಿ 5 ನಿಮಿಷ ಬಿಡಬೇಕು. ನಂತರ ಬೇಬಿ ಕಾರ್ನ್ ಗಳನ್ನು ತೆಗೆದು ಪಾತ್ರೆಯೊಂದಕ್ಕೆ ಹಾಕಿಕೊಳ್ಳಬೇಕು.

ಪಾತ್ರೆಯೊಂದನ್ನು ತೆಗೆದುಕೊಂಡು, ಉಪ್ಪು, ಖಾರದ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಮೈದಾಹಿಟ್ಟು, ಜೋಳದ ಹಿಟ್ಟು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಕಾಯಲು ಬಿಡಬೇಕು.

ಎಣ್ಣೆ ಕಾದ ನಂತರ ಗಟ್ಟಿಯಾಗಿ ಕಲಸಿಕೊಂಡ ಹಿಟ್ಟಿಗೆ ಬೇಬಿ ಕಾರ್ನ್ ಗಳನ್ನು ಅದ್ದಿ ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಕರಿದುಕೊಳ್ಳಬೇಕು.
ನಂತರ ಮತ್ತೊಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಶುಂಠಿ, ಬೆಳ್ಳುಳ್ಳು ಪೇಸ್ಟ್ ಹಾಕಿ ಹುರಿದುಕೊಳ್ಳಬೇಕು. ನಂತರ ಈರುಳ್ಳಿ, ದೊಡ್ಡ ಮೆಣಸಿನ ಕಾಯಿ, ಈರುಳ್ಳಿ ಸೊಪ್ಪು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.

ಚಿಲ್ಲಿ ಸಾಸ್, ಸೋಯಾ ಸಾಸ್, ಉಪ್ಪು, ಅಚ್ಚ ಖಾರದ ಪುಡಿ ಹಾಗೂ ದೊಡ್ಡ ಉರಿಯಲ್ಲಿ ಮಸಾಲೆ ಗಟ್ಟಿಯಾಗುವವರೆಗೂ ಬಿಡಬೇಕು. ನಂತರ ಈಗಾಗಲೇ ಎಣ್ಣೆಯಲ್ಲಿ ಕರಿದಿಟ್ಟುಕೊಂಡ ಬೇಬಿ ಕಾರ್ನ್ ಗಳನ್ನು ಇದಕ್ಕೆ ಹಾಕಬೇಕು. ನಂತರ ಬಟ್ಟಲೊಂದಕ್ಕೆ ಸ್ವಲ್ಪ ಜೋಳದ ಹಿಟ್ಟನ್ನು ಹಾಕಿ ಅದಕ್ಕೆ ನೀರನ್ನು ಹಾಕಿಡಬೇಕು.

ಇದನ್ನು ಮಸಾಲೆಯೊಂದಿಗೆ ಬೆಂದ ಬೇಬಿ ಕಾರ್ನ್ ಗೆ ಹಾಕಿ ಮತ್ತೆ 5 ನಿಮಿಷಗಳ ಬೇಯಲು ಬಿಡಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾಗ ಬೇಬ್ ಕಾರ್ನ್ ಮಂಚೂರಿ ರೆಡಿ

Spread the love

Related Articles

Leave a Reply

Your email address will not be published. Required fields are marked *

Back to top button