Latestಜಿಲ್ಲಾ ಸುದ್ದಿಮೈಸೂರು

ಸಮಸ್ಯೆ ಹೇಳಿಕೊಳ್ಳಲು ಬಂದವರಿಗೆ ಶಾಸಕರ ಅವಾಜ್

ಮೈಸೂರು: ಸುಮ್ಮನೇ ನಿಂತ್ಕೊಳ್ಳಯ್ಯ. ನಾನು ಮಾತನಾಡೋದನ್ನ ಕೇಳಿಸ್ಕೋ, ನೀನೇನು ಮಾತನಾಡೋದು ಎಂದು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರಿಗೆ ಶಾಸಕ ನರೇಂದ್ರ ಅವಾಜ್ ಹಾಕಿ ವಾಪಸ್ ಕಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಜಿಲ್ಲಾ ಪಂಚಾಯತ್‌ನಲ್ಲಿ ಇಂದು ವಸತಿ ಸಚಿವ ವಿ. ಸೋಮಣ್ಣ ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಅಧಿಕಾರಿಗಳ ಜೊತೆ ಸಭೆ ನಡೆಸಿ ಹೊರ ಬರುತ್ತಿದಂತೆ ಅಲ್ಲಿಗೆ ಬಂದಿದ್ದ ಏಕಲವ್ಯ ನಗರದ ಜನರು ತಮ್ಮ ಸಮಸ್ಯೆಗಳನ್ನ ಸಚಿವರ ಬಳಿ ಹೇಳಿಕೊಂಡಿದ್ದಾರೆ.

ಈ ವೇಳೆ ಅಲ್ಲಿಯೇ ಇದ್ದ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಏರು ಧ್ವನಿಯಲ್ಲಿ ಸಮಸ್ಯೆ ಹೇಳಿಕೊಳ್ಳುತ್ತಿದ್ದ ಜನರಿಗೆ ಸುಮ್ಮನೇ ನಿಂತ್ಕೊಳ್ಳಯ್ಯ. ನಾನು ಮಾತನಾಡೋದನ್ನ ಕೇಳಿಸ್ಕೋ, ನೀನೇನು ಮಾತನಾಡೋದು ಎಂದು ಜನರ ವಿರುದ್ದ ಗರಂ ಆಗಿದ್ದಾರೆ.

ನೀನು ಎಷ್ಟೇ ಕೂಗಾಡಿದರು ಅದಕ್ಕೆ ಹೆಚ್ಚಾಗಿ ನಾನು ಕೂಗಾಡ್ತೀನಿ ಎಂದು ಶಾಸಕರು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಹೀಗೆ ಮಾತಿಗೆ ಮಾತು ಬೆಳೆದಿದ್ದು ನಂತರ ಜನರು ಸಮಾಧಾನ ಪಡಿಸಿದರು. ಮೈಸೂರಿನ ಹೊರವಲಯದ ಏಕಲವ್ಯ ನಗರದ ನಿವಾಸಿಗಳ 475 ಮನೆಗಳನ್ನ ಕೆರೆ ಜಾಗ ಎಂದು ತಡೆ ಹಿಡಿಯಲಾಗಿದೆ.

ಈ ಹಿಂದೆ ಈ ಜಾಗವನ್ನ ಕೆರೆ ಜಾಗ ಎಂದು ನೋಡದೆ ಜನರಿಗೆ ಹಂಚಿಕೆ ಮಾಡಲಾಗಿದೆ. ಅಲ್ಲಿ ಕೆಲವು ಕುಟುಂಬಗಳು ವಾಸವಿದ್ದು, ಕೆಲವು ಸೈಟ್‌ಗಳನ್ನು ಸಹ ಹಂಚಿಕೆ ಮಾಡಲಾಗಿದೆ. ಆದರೆ ಈಗ ಈ ಜಾಗ ಕೆರೆ ಎಂದು ತಡೆಹಿಡಿದಿದ್ದು ಅಲ್ಲಿನ ಜನರಿಗೆ ಸಮಸ್ಯೆಯಾಗಿದೆ.

ಸಮಸ್ಯೆ ಹೇಳಲು ಬಂದ ಜನರ ಮೇಲೆ ಸ್ಥಳೀಯ ಬಿಜೆಪಿ ಶಾಸಕ ನಾಗೇಂದ್ರ ಅವರು, ತಾನೊಬ್ಬ ಜನ ಪ್ರತಿನಿಧಿ ಎಂಬುದನ್ನೂ ಮರೆತು ದರ್ಪ ತೋರಿಸಿದ್ದಾರೆ. ಸಮಸ್ಯೆ ಹೇಳಲು ಬಂದ ಜನರ ಬಳಿ ಜನಪ್ರತಿನಿಧಿಯಾಗಿ ಈ‌ ರೀತಿ ವರ್ತಿಸಿರುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button