ಜಿಲ್ಲಾ ಸುದ್ದಿಮೈಸೂರು
ಸೋಲಾರ್ ತಂತಿಗೆ ಸಿಲುಕಿದ್ದ ಚಿರತೆ ರಕ್ಷಣೆ

ಮೈಸೂರು : ಬಾಳೆ ತೋಟವೊಂದರ ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಸಿಲುಕಿ ನರಳಾಡುತ್ತಿದ್ದ ಚಿರತೆಯನ್ನು ರಕ್ಷಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಸರಗೂರು ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಸೋಲಾರ್ ತಂತಿಗೆ ಸಿಲುಕಿ ಚಿರತೆ ನರಳುತ್ತಿತ್ತು. ಸೋಲಾರ್ ತಂತಿಗೆ ಸಿಲುಕಿದ್ದ ನಾಲ್ಕು ವರ್ಷದ ಗಂಡು ಚಿರತೆ ಬಲಗಾಲು ಗಾಯಗೊಂಡ ಹಿನ್ನೆಲೆ ಸೋಲಾರ್ ತಂತಿಯಿಂದ ಬಿಡಿಸಿಕೊಳ್ಳಲು ಚೀರಾಡಿದೆ.
ಚಿರತೆ ಕಂಡ ನುಗು ಅರಣ್ಯ ಇಲಾಖೆಯ ಆರ್ಎಫ್ಒ ಗಮನಕ್ಕೆ ತರಲಾಗಿದೆ. ನಂತರ ಹೆಡಿಯಾಲ ಅರಣ್ಯ ಇಲಾಖೆ ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಅರವಳಿಕೆ ಮದ್ದನ್ನು ನೀಡಿ ಚಿರತೆ ಸೆರೆ ಹಿಡಿದಿದ್ದಾರೆ. ಚಿಕಿತ್ಸೆ ನೀಡಿದ ಬಳಿಕ ಚಿರತೆಯನ್ನ ಅರಣ್ಯದೊಳಗೆ ಬಿಡಲಿದ್ದಾರೆ.




