LatestStoriesರಾಷ್ಟ್ರೀಯಸುದ್ದಿ

4 ಕಾಲು, 4 ಕೈಗಳಿರುವ ವಿಚಿತ್ರ ಮಗು ಜನನ

ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ವಿಚಿತ್ರ ಮಗುವಿನ ಜನನವಾಗಿದೆ. ಕತಿಹಾರ್​ನ ಸದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕೈ ಹಾಗೂ ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಆರೋಗ್ಯವಾಗಿರೋದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸುದ್ದಿ ಎಲ್ಲೆಡೆ ಹರಿದಾಡ್ತಿದ್ದಂಗೆ ಮಗುವನ್ನ ನೋಡಲು ಆಸ್ಪತ್ರೆಗೆ ಜನ ಓಡೋಡಿ ಬರ್ತಿದ್ದಾರೆ.

ರಾಜು ಶಾ ಎಂಬುವವರ ಪತ್ನಿ ಕಳೆದ ಸೋಮವಾರ ನಾಲ್ಕು ಕಾಲು ಹಾಗೂ ನಾಲ್ಕು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ಸುದ್ದಿ ತಿಳಿದು ಓಡೋಡಿ ಬಂದಿದ್ದ ತಂದೆ ಮಗುವಿಗೆ ನಾಲ್ಕು ಕೈ ಹಾಗೂ ನಾಲ್ಕು ಕಾಲುಗಳಿರುವುದನ್ನ ನೋಡಿ ಶಾಕ್ ಆಗಿದ್ದಾರೆ.

ಮೂಲಗಳ ಪ್ರಕಾರ ಮಗುವಿನ ಕುಟುಂಬದವ್ರು ಖಾಸಗಿ ಕ್ಲಿನಿಕ್ ವೈದ್ಯರು ವಿರುದ್ಧ ಆರೋಪ ಮಾಡುತ್ತಿದ್ದಾರೆ. ಸಂಬಂಧಿಕರು ಹೇಳುವು ಪ್ರಕಾರ ಮಹಿಳೆಯು ಗರ್ಭ ಧರಿಸಿದ ಸಂದರ್ಭದಲ್ಲಿ ಖಾಸಗಿ ಕ್ಲಿನಿಕ್​​ನಲ್ಲಿ ಅನೇಕ ಬಾರಿ ಅಲ್ಟ್ರಾಸೌಂಡ್ ಮಾಡಿಸಲಾಗಿತ್ತು. ಆದ್ರೆ ಈ ವೇಳೆ ವೈದ್ಯರು ಏನು ಹೇಳಿಲ್ಲ ಎಂದು ಆರೋಪ ಮಾಡ್ತಿದ್ದಾರೆ.

ಮಗು ದೈಹಿಕವಾಗಿ ವಿಕಲಾಂಗವಾಗಿದೆ. ಮಹಿಳೆಯ ಗರ್ಭದಲ್ಲಿ ಅವಳಿ ಮಕ್ಕಳಿದ್ದು ಅವುಗಳು ಸರಿಯಾಗಿ ಬೆಳವಣಿಗೆ ಆಗದ ಕಾರಣ ಈ ರೀತಿಯಾಗಿ ಮಗು ಜನಿಸಿದೆ. ಸದ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಕತಿಹಾರ್​ನ ಸದರ್ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button