ದಾವಣಗೆರೆ

ದಾವಣಗೆರೆಯ ಬಾತಿ ಬಳಿ ಕೆರೆಗೆ ಬಿದ್ದ ಕಾರು: ಮುಂದೇನಾಯ್ತು ಗೊತ್ತಾ?

ದಾವಣಗೆರೆ: ಚಾಲಕ ನಿಯಂತ್ರಣ ತಪ್ಪಿ ಬಾತಿ ಕೆರೆಯಲ್ಲಿ ಕಾರು ಪಲ್ಟಿಯಾದ ಘಟನೆ ನಡೆದಿದ್ದು, ಕ್ರೇನ್ ಮೂಲಕ ಕಾರನ್ನು ಹೊರಕ್ಕೆ ತೆಗೆಯಲಾಗಿದೆ.

ದಾವಣಗೆರೆ ತಾಲೂಕಿನ ಬಾತಿ ಬಳಿಯ ಕೆರೆಯಲ್ಲಿ ಕಾರೊಂದು ಪಲ್ಟಿಯಾಗಿದ್ದು, ಕ್ರೇನ್ ಮೂಲಕ ಕಾರ್ ಅನ್ನ ಹೊರಗೆ ತೆಗೆಯಲಾಗಿದೆ. ಹರಿಹರ ಕಡೆಯಿಂದ ದಾವಣಗೆರೆ ಕಡೆಗೆ ಬರುತ್ತಿದ್ದಾಗ ವೇಳೆ ಈ ಘಟನೆ ಸಂಭವಿಸಿದೆ.

ಅವಘಡದಿಂದ ಕಾರ್ ನಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

ಘಟನೆಯಲ್ಲಿ ಕಾರು ಡ್ಯಾಮೇಜ್ ಆಗಿದೆ. ಕಾರು ಅನ್ನ ಹೊರಗೆ ತೆಗೆಯುತ್ತಿದ್ದ ದೃಶ್ಯವನ್ನ ನೋಡಲು ಸ್ಥಳೀಯರು ಬಂದಿದ್ದರು. ಹೀಗಾಗಿ ದಾವಣಗೆರೆ-ಹರಿಹರ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.

Related Articles

Leave a Reply

Your email address will not be published. Required fields are marked *

Back to top button