ಮನರಂಜನೆಸಿನಿಮಾಸೆಲೆಬ್ರಿಟಿ

ಪ್ರಜ್ವಲ್ ಜೊತೆ ಡ್ಯೂಯೆಟ್ ಹಾಡೋಕೆ ಬಂದ ವೇದಿಕಾ

ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸಿನಿಮಾ ರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊದಂರಂತೆ ಚಿತ್ರಗಳಿಗೆ ಬಣ್ಣ ಹಚ್ಚುತ್ತೀರೋ ಪ್ರಜ್ವಲ್ ನಟನೆಯ ಹೊಸ ಸಿನಿಮಾ ಗಣ ಇತ್ತೀಚೆಗಷ್ಟೇ ಸೆಟ್ಟೇರಿದೆ. ಸದ್ಯ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಸಿಕ್ಕಿದ್ದು ಚಿತ್ರಕ್ಕೆ ಮತ್ತೊರ್ವ ನಟಿಯ ಎಂಟ್ರಿಯಾಗಿದೆಯಂತೆ.

ಪ್ರಜ್ವಲ್ ದೇವರಾಜ್ ನಟನೆಯ ಗಣ ಚಿತ್ರಕ್ಕೆ ನಟಿ ವೇದಿಕಾ ಎಂಟ್ರಿಕೊಟ್ಟಿದ್ದಾರೆ. 2008ರಲ್ಲಿ ಗಣೇಶ್ ನಟನೆಯ ಸಂಗಮ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟ ವೇದಿಕಾ ಬಳಿಕ ಶಿವರಾಜ್ ಕುಮಾರ್ ಜೊತೆ ಶಿವಲಿಂಗ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಸದ್ಯ ವೇದಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು ಆರು ವರ್ಷದ ಬಳಿಕ ಮತ್ತೆ ಚಂದನವನಕ್ಕೆ ಎಂಟ್ರಿಕೊಟ್ಟಿದ್ದಾರೆ.

ಗಣ ಚಿತ್ರವನ್ನ ಹರಿ ಪ್ರಸಾದ್ ಜಕ್ಕ ನಿರ್ದೇಶನ ಮಾಡ್ತಿದ್ದಾರೆ. ಈ ಹಿಂದೆ ದರ್ಶಕುಡು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಹರಿ ಪ್ರಸಾದ್ ನೆನೊಕ್ಕಡೇನ್, 100% ಲವ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಿರ್ದೇಶಕ ಸುಕುಮಾರ್ ಜೊತೆ ಬರಹಗಾರರಾಗಿ ಕೆಲಸ ಮಾಡಿದ್ದರು. ಇದೀಗ ಇದೇ ಮೊದಲ ಭಾರಿಗೆ ಚಂದನವನಕ್ಕೆ ಎಂಟ್ರಿಕೊಟ್ಟಿದ್ದು ನಿರ್ದೆಶಕರಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಗಣ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾವಾಗಿದ್ದು ಫೆಬ್ರವರಿ ಮೊದಲ ವಾರದಿಂದ ಶೂಟಿಂಗ್ ಆರಂಭವಾಗಲಿದೆ. ಚಿತ್ರಕ್ಕೆ ಈಗಾಗ್ಲೆ ನಟಿ ಅರ್ಚನಾ ಕೊಟ್ಟಿಗೆ ಎಂಟ್ರಿಕೊಟ್ಟಿದ್ದು ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ತಿದ್ದಾರೆ. ಸದ್ಯ ಪ್ರಜ್ವಲ್ ದೇವರಾಜ್ ಮಾಫಿಯಾ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು ಈಗಾಗ್ಲೆ 50% ಚಿತ್ರೀಕರಣ ಕಂಪ್ಲೀಟ್ ಆಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button