ಕೋವಿಡ್ ನಿಯಮ ಗಾಳಿಗೆ ತೂರಿ ಬಾಣಂತಿ ದೇವಿ ಜಾತ್ರೆ ಆಚರಣೆ

ಕಾರವಾರ : ಕೋವಿಡ್ ನಿಯಮ ಗಾಳಿಗೆ ತೂರಿ,ವಿಕೇಂಡ್ ಕರ್ಪ್ಯೂ ಸಮಯದಲ್ಲಿ ವಿಜೃಂಭಣೆಯಿಂದ ಬಾಣಂತಿ ದೇವಿ ಜಾತ್ರೆ ನಡೆಸಿದ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಸಾಲಗಾಂವ ಗ್ರಾಮದಲ್ಲಿ ಶನಿವಾರ ನಡೆದಿದೆ. ಮಕ್ಕಳಿಲ್ಲದ ದಂಪತಿಗಳು ಹರಕೆ ಕಟ್ಟಿಕೊಳ್ಳುವುದೇ ಈ ಜಾತ್ರೆಯ ವಿಶೇಷವಾಗಿದ್ದು,ಕೆರೆ ನೀರಿನಲ್ಲಿ ಮಗುವನ್ನು ಅರ್ದ ಮುಳುಗಿಸುವ ಪದ್ದತಿ ಈ ಜಾತ್ರೆಯ ವಿಶೇಷವಾಗಿದೆ.ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದರೂ ದೇವಸ್ಥಾನ ಆಡಳಿತ ಮಂಡಳಿ ಜಾತ್ರೆ ನಡೆಸಿದೆ.ಸಾಲಗಾಂವ ಗ್ರಾಮದ ಅಕ್ಕಪಕ್ಕದ ಹಳ್ಳಿ ಹಾಗೂ ಧಾರವಾಡ,ಹುಬ್ಬಳ್ಳಿಯಿಂದ ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು.
ಈಗಾಗಲೇ ಜಿಲ್ಲಾಡಳಿತ ಜಾತ್ರೆ ನಡೆಸಲು ನಿರ್ಬಂಧ ಹೇರಿದೆ.ಆದರೆ ಸಾಲಗಾಂವ ನಲ್ಲಿ ಆಡಳಿತ ಮಂಡಳಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜಾತ್ರೆ ನಡೆಸುವ ಜೊತೆ ವಾಣಿಜ್ಯ ಮಳಿಗೆಗಳನ್ನು ಸಹ ತೆರೆದು ಸಾವಿರಾರು ಜನರು ಸೇರುವಂತೆ ಮಾಡಿದ್ದು,ಜನರು ಸಹ ವೀಕೆಂಡ್ ಕರ್ಫ್ಯೂ ಇದ್ದರೂ ಸಾವಿರಾರು ಜನ ಜಾತ್ರೆಗೆ ಜಮಾಯಿಸಿದ್ದಾರೆ.
ವೀಕೆಂಡ್ ಕರ್ಪ್ಯೂ ಇದ್ದುದ್ದರಿಂದ ಪೊಲೀಸರು ಆಯಕಟ್ಟಿನಲ್ಲಿ ಬ್ಯಾರಿಕೇಡ್ ಆಳವಡಿಸಿ ಬಂದೋಬಸ್ತ್ ಮಾಡಿದೆ.ಆದರೆ ಕಠಿಣ ನಿಯಮ ಜಾರಿಗೆ ತರದ ಹಿನ್ನೆಲೆಯಲ್ಲಿ ಜನರು ಬೇಕಾಬಿಟ್ಟಿಯಾಗಿ ಜಾತ್ರೆಗೆ ಆಗಮಿಸಿದ್ದರು.ಇನ್ನು ಸದ್ಯ ಇಲಾಖೆ ಎಚ್ಚರಿಕೆ ನೀಡಿದ್ದು ಹೊರತುಪಡಿಸಿದರೆ ಈವರೆಗೂ ಪ್ರಕರಣ ದಾಖಲಿಸಿಲ್ಲ.



