ನಿರೀಕ್ಷೆ ಹುಸಿಗೊಳಿಸಿದ ಪುನೀತ್ ನಟನೆಯ ಕೊನೆಯ ಸಿನಿಮಾ

ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಚಿತ್ರ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡ್ತಾರೆ ಎಂದು ಕಾದು ಕೂತಿದ್ದ ಅಭಿಮಾನಿಗಳಿಗೆ ಚಿತ್ರತಂಡ ನಿರಾಸೆ ಮೂಡಿಸಿದೆ.
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಸಿನಿಮಾ ಪುನೀತ್ ನಟನೆಯ ಕೊನೆಯ ಸಿನಿಮಾವಾಗಿದೆ. ಜೇಮ್ಸ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುವ ಸಮಯದಲ್ಲೇ ಪುನೀತ್ ಇಹಲೋಕ ತ್ಯಹಿಸಿದ್ರು. ಹೀಗಾಗಿ ಜೇಮ್ಸ್ ಸಿನಿಮಾದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇದ್ದು ಚಿತ್ರ ಯಾವಾಗ ರಿಲೀಸ್ ಆಗುತ್ತೆ ಅಂತ ಇಡೀ ಕರುನಾಡೆ ಕಾದು ಕೂತಿದೆ.
ಪುನೀತ್ ರಾಜ್ ಕುಮಾರ್ ಹಾಗೂ ಚೇತನ್ ಕುಮಾರ್ ಕಾಂಬಿನೇಷನ್ ಜೇಮ್ಸ್ ಸಿನಿಮಾದ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ. ಪೋಸ್ಟರ್ ನಲ್ಲಿ ಪುನೀತ್ ಬೈಕ್ ಏರಿ ಕುಳಿತಿದ್ದು ಅಪ್ಪು ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪು ಪೋಸ್ಟರ್ ನೋಡಿ ಕೋಟ್ಯಾಂತರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಜೇಮ್ಸ್ ಸಿನಿಮಾ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ತೆರೆಗೆ ಬರುತ್ತೆ ಅನ್ನೋ ಮಾತು ಕೇಳಿ ಬಂದಿತ್ತು. ಆದ್ರೆ ಈಗ ರಿಲೀಸ್ ಆಗಿರೋ ಪೋಸ್ಟರ್ ನಲ್ಲಿ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅನ್ನೋದನ್ನ ಚಿತ್ರತಂಡ ರಿವೀಲ್ ಮಾಡಿಲ್ಲ. ವೀಕೆಂಡ್ ಕರ್ಫ್ಯೂ ಜೊತೆಗೆ ಕೊರೊನಾ ಅಬ್ಬರ ಕೂಡ ಹೆಚ್ಚಾಗಿದ್ದು ದೊಡ್ಡ ಬಜೆಟ್ ನ ಚಿತ್ರಗಳ ರಿಲೀಸ್ ಡೇಟ್ ಮುಂದೂಡಲಾಗಿದೆ. ಹೀಗಾಗಿ ಜೇಮ್ಸ್ ಸಿನಿಮಾ ಕೂಡ ರಿಲೀಸ್ ಡೇಟ್ ನ ಪೋಸ್ಟ್ ಫೋನ್ ಮಾಡಿದೆ ಅನ್ನೋ ಸುದ್ದಿ ಹರಿದಾಡ್ತಿದೆ.
ಜೇಮ್ಸ್ ಚಿತ್ರದ ಪುನೀತ್ ಪಾತ್ರಕ್ಕೆ ಯಾರು ಧ್ವನಿಯಾಗ್ತಾರೆ ಅನ್ನೋ ಕುತೂಹಲ ಶುರುವಾಗಿದೆ. ಶೂಟಿಂಗ್ ಸೆಟ್ ನಲ್ಲಿ ನಡೆದ ಪುನೀತ್ ಸಂಭಾಷಣೆಯನ್ನೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.




