Anushka Shetty: ಸ್ಟಾರ್ ನಟನೊಂದಿಗೆ ಬಾಹುಬಲಿ ಬ್ಯೂಟಿಯ ಕಮ್ ಬ್ಯಾಕ್

ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದು ಇದೀಗ ಮತ್ತೆ ಕಮ್ಬ್ಯಾಕ್ ಮಾಡಿದ್ದಾರೆ. 2020ರಲ್ಲಿ ತೆರೆಕಂಡ ನಿಶ್ಯಬ್ದಂ ಚಿತ್ರದ ಬಳಿಕ ಬಣ್ಣದ ಬದುಕಿನಿಂದ ದೂರವಾಗಿದ್ದ ಅನುಷ್ಕಾ ಇದೀಗ ಸ್ಟಾರ್ ನಟನೊಂದಿಗೆ ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ದೂಳೆಬ್ಬಿಸೋಕೆ ರೆಡಿಯಾಗಿದ್ದಾರೆ.
ಮಂಗಳೂರು ಮೂಲದ ಚೆಲುವೆ ಅನುಷ್ಕಾ ಶೆಟ್ಟಿ ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಜೊತೆ ಮೊಟ್ಟ ಮೊದಲ ಭಾರಿಗೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ. 2006ರಲ್ಲಿ ತೆರೆಕಂಡ ಚಿರಂಜೀವಿ ನಟನೆಯ ಸ್ಟಾಲಿನ್ ಸಿನಿಮಾದ ಸ್ಪೆಷಲ್ ಹಾಡೊಂದರಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಅಲ್ಲದೆ ಅನುಷ್ಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ರುದ್ರಮ್ಮದೇವಿ ಚಿತ್ರವನ್ನ ಚಿರಂಜೀವಿ ನಿರೂಪಿಸಿದ್ದರು.
ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಅನುಷ್ಕಾ ಸ್ಪೆಷಲ್ ಅಪಿಯರೆನ್ಸ್ನಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಈ ಇಬ್ಬರು ಸ್ಟಾರ್ಗಳು ಲೀಡ್ ರೋಲ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿತ್ತು. ಇದೀಗ ಮೊಟ್ಟ ಮೊದಲ ಭಾರಿಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ತಿದ್ದು ನಿರೀಕ್ಷೆ ಮೂಡಿಸಿದ್ದಾರೆ.
ನಟ ಚಿರಂಜೀವಿ ಆಚಾರ್ಯ, ಗಾಡ್ಫಾದರ್ ಹಾಗೂ ಭೋಲಾ ಶಂಕರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಈ ಸಿನಿಮಾಗಳು ಕಂಪ್ಲೀಟ್ ಆದ ಬಳಿಕ ಚಿರಂಜೀವಿ ಹಾಗೂ ಅನುಷ್ಕಾ ನಟನೆಯ ಸಿನಿಮಾ ಸೆಟ್ಟೇರಲಿದೆ.



