Latestಮನರಂಜನೆಸಿನಿಮಾ

Bhavana Mennon: ಕೊನೆಗೂ ನಟಿ ಭಾವನಾ ಪರ ನಿಂತ ಹಲವು ಸಿನಿ ತಾರೆಯರು

2017ರ ಫೆಬ್ರವರಿಯಲ್ಲಿ ನಟಿ ಭಾವನಾ ಮೆನನ್ ಮೇಲೆ ನಡೆದ ಲೈಂಗಿಕ ಕಿರುಕುಳದ ಕುರಿತು ಭಾವನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ಐದು ವರ್ಷಗಳ ಬಳಿಕ ಈ ಬಗ್ಗೆ ಮೌನ ಮುರಿದ ಭಾವನಾ ತಮ್ಮ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳವನ್ನ ಹೇಳಿಕೊಂಡಿದ್ದಾರೆ. ಭಾವನಾ ಅವರ ಪೋಸ್ಟ್​ಗೆ ಸಾಕಷ್ಟು ಮಂದಿ ಸಪೋರ್ಟ್ ಮಾಡಿದ್ದು ನಟಿ ಸಮಲತಾ, ನಟರಾದ ಮಮ್ಮುಟ್ಟಿ, ಮೋಹನ್ ಲಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ಭಾವನಾ ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪ್ರಕರಣದ ಕುರಿತು ಇಷ್ಟು ವರ್ಷಗಳ ಕಾಲ ಮೌನವಾಗಿದ್ದ ಮಲಯಾಳಂ ಸೂಪರ್ ಸ್ಟಾರ್​ಗಳಾದ ಮಮ್ಮೂಟ್ಟಿ ಹಾಗೂ ಮೋಹನ್ ಲಾಲ್ ಕೊನೆಗೂ ಮೌನ ಮುರಿದಿದ್ದಾರೆ.

ಭಾವನಾ ಮೆನನ್ ಮಾಡಿದ ಇನ್​ಸ್ಟಾಗ್ರಾಂ ಪೋಸ್ಟ್​ನ್ನು ಮಮ್ಮುಟ್ಟಿ ರಿಶೇರ್ ಮಾಡಿ, ನಿಮ್ಮ ಜೊತೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ನಟ ಮೋಹನ್ ಲಾಲ್ ರೆಸ್ಪೆಕ್ಟೆಡ್ ಎಂಬ ಬರೆದು ರಿಶೇರ್ ಮಾಡಿದ್ದಾರೆ. ಅಲ್ಲದೆ ಬಾಲಿವುಡ್ ನಿರ್ದೇಶಕ ಜೋಯಾ ಅಖ್ತರ್ ಭಾವನಾಗೆ ನೈತಿಕ ಬೆಂಬಲ ನೀಡಿದ್ದು ನಿಮಗೆ ಇನ್ನಷ್ಟು ಶಕ್ತಿ ಸಿಗಲಿ ಎಂದಿದ್ದಾರೆ.

ಭಾವನಾ ಟ್ವಿಟ್​​ಗೆ ಪ್ರತಿಕ್ರಿಯಿಸಿದ ನಟಿ ಸುಮಲತಾ ಅಂಬರೀಶ್ ಆಕೆಯ ಬಹಿರಂಗ ನಿಲುವನ್ನು ನಾನು ಮೆಚ್ಚುತ್ತೇನೆ. ತಪ್ಪು ಮಾಡಿದವರು ಯಾವುದೇ ನಾಚಿಕೆ ತೋರದಿರುವಾಗ ತಪ್ಪು ಮಾಡದವರು ಏಕೆ ಮೌನವಾಗಿರಬೇಕು ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button