ಕಾರವಾರದಲ್ಲಿ ರೈಲ್ವೆ ಅಡಿ ಬಿದ್ದ ಪ್ರಯಾಣಿಕನ ರಕ್ಷಣೆ

ಕಾರವಾರ : ರೈಲ್ವೆ ಬೋಗಿಯಿಂದ ರೈಲಿನ ಅಡಿ ಭಾಗಕ್ಕೆ ಆಯ ತಪ್ಪಿ ಬೀಳುತ್ತಿದ್ದ ಪ್ರಯಾಣಿಕನೋರ್ವನನ್ನು ರೈಲ್ವೆ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ಸಿಬ್ಬಂದಿ ನರೇಶ್ ರಕ್ಷಣೆ ಮಾಡಿದವರಾಗಿದ್ದಾರೆ. ಬೆಂಗಳೂರು ಮೂಲದ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ.ದೇಸಾಯಿ (59) ರಕ್ಷಣೆಗೊಳಗಾದ ವ್ಯಕ್ತಿಯಾಗಿದ್ದಾರೆ. ಪ್ಲಾಟ್ ಪಾರಂ ಒಂದರಲ್ಲಿ ಲಗೇಜು ತೆಗೆದುಕೊಳ್ಳಲು ರೈಲ್ವೆಯಿಂದ ದೇಸಾಯಿ ಅವರು ಇಳಿಯುವಾಗ ರೈಲು ಹೊರಟಿದ್ದರಿಂದ ಆಯ ತಪ್ಪಿ ಬಿದ್ದಿದ್ದರು.ಈ ವೇಳೆ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಇವರನ್ನು ರಕ್ಷಣೆ ಮಾಡಿದ್ದಾರೆ.
ಚಿಕ್ಕಪುಟ್ಟ ಗಾಯವಾಗಿದ್ದ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ರೈಲ್ವೆ ಇನ್ಸಪೆಕ್ಟರ್ ನೀಲೇಶ್ ದುಬೆಯವರ ಸಹಾಯದಿಂದ ಮತ್ತೊಂದು ರೈಲ್ವೆ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಇಲಾಖೆ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ.ರಕ್ಷಣೆ ಮಾಡಿದ ವಿಡಿಯೋವನ್ನು ಕೊಂಕಣ ರೈಲ್ವೆ ಇಲಾಖೆ ಬಿಡುಗಡೆಗೊಳಿಸಿ ಪ್ರಯಾಣಿಕರು ಜಾಗೃತಿ ಇರುವಂತೆ ಕೋರಿದ್ದಾರೆ.



