Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜಕೀಯರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಮೇಕೆದಾಟು ಪಾದಯಾತ್ರೆಯನ್ನು ತಮಿಳುನಾಡು ಕಾಂಗ್ರೆಸ್ ಬೆಂಬಲಿಸುವುದೇ? : ಜಗದೀಶ್ ಶೆಟ್ಟರ್ ಪ್ರಶ‍್ನೆ

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರು ತಮಿಳುನಾಡಿನ ಕಾಂಗ್ರೆಸ್ ನಾಯಕರ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮಾಜಿ ಸಿಎಂ, ಬಿಜೆಪಿ ಧುರೀಣ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತರೂಢ ಡಿಎಂಕೆ ಮಿತ್ರಪಕ್ಷವಾಗಿರುವ ತಮಿಳುನಾಡು ಕಾಂಗ್ರೆಸ್ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ.  ಆದರೆ ಅದೇ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿದ್ದಾರೆ. ಕಾಂಗ್ರೆಸ್ ಈ ಹಿಂದಿನಿಂದಲೂ ದ್ವಂದ್ವನೀತಿಯ ರಾಜಕಾರಣ ಮಾಡುತ್ತಲೇ ಬಂದಿದ್ದಾರೆ ಎಂದರು.

ತಮಿಳುನಾಡಿನ ಕಾಂಗ್ರೆಸ್ ನಾಯಕರು, ರಾಜ್ಯದ ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಯನ್ನು ಬೆಂಬಲಿಸಲಿ. ಆಗ ನಾವು ಡಿಕೆಶಿಯವರ ಪಾದಯಾತ್ರೆ ಒಪ್ಪಿಕೊಳ್ಳುತ್ತೇವೆ ಎಂದರು.

ಮಹದಾಯಿ ವಿಷಯದಲ್ಲೂ ದ್ವಂದ್ವ ನೀತಿ

ಕಾಂಗ್ರೆಸ್ ನಾಯಕರ ದ್ವಂದ್ವ ನೀತಿಯ ರಾಜಕಾರಣ ಮಹದಾಯಿ ವಿಚಾರದಲ್ಲಿಯೂ ಇದೆ. ‌ಈ ಹಿಂದೆ ಮಹದಾಯಿ ಹೋರಾಟ ನಡೆಯುವ ಸಂದರ್ಭದಲ್ಲಿ, ನಾವು ನಮ್ಮ ಪಕ್ಷದ ನಾಯಕರ ಮನವೊಲಿಸುತ್ತೇವೆ ನೀವು ನಿಮ್ಮ ಪಕ್ಷವನ್ನು ಮನವೊಲಿಸಿ ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಅದಕ್ಕೆ ಕಾಂಗ್ರೆಸ್ ಮುಖಂಡರು ಕಿವಿಗೂಡಲಿಲ್ಲ. ನಾವು ಗೋವಾ ಬಿಜೆಪಿ ನಾಯಕರ ಮನವೊಲಿಸಿದ್ದೆವು ಎಂದು ಹೇಳಿದರು.

ಈಗ‌ ಕಾಂಗ್ರೆಸ್ ಮತ್ತೆ ಮಹದಾಯಿ ಬಗ್ಗೆ ಪಾದಯಾತ್ರೆ ಮಾಡುವುದಾದರೆ ಮಾಡಲಿ, ಅವರು ಈ ಹಿಂದೆ ಯಾವ ರೀತಿ ನಡೆದುಕೊಂಡರು ಎನ್ನುವುದನ್ನು ನಾವು ಜನರ ಮುಂದಿಡುತ್ತೇವೆ ಎಂದು ಶೆಟ್ಟರ್ ಹೇಳಿದರು.  

ಟೆಂಡರ್ ಕರೆಯಲಾಗಿದೆ.

ಧಾರವಾಡ ನರೇಂದ್ರ ಟೋಲ್‌ನಿಂದ‌ ಗಬ್ಬೂರ ಟೋಲ್‌ವರೆಗೆ ರಾಷ್ಟ್ರೀಯ ಹೆದ್ದಾರಿಯು ಟು ವೇ ಆಗಿದೆ. ಇದರಿಂದಾಗಿ ಅಪಘಾತಗಳು ಹೆಚ್ಚಿದ್ದು ಅದನ್ನು ತಪ್ಪಿಸಲು 31 ಕಿಲೋಮೀಟರ್ ರಸ್ತೆಯನ್ನು 6 ವೇ ಮಾಡಲು ಕೇಂದ್ರವ ಸರ್ಕಾರ ಒಪ್ಪಿಗೆ ನೀಡಿದೆ. ಈ ಸಂಬಂಧ  ಟೆಂಡರ್ ಕರೆಲಾಗಿದ್ದು, ಇನ್ನೆರಡೂವರೇ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button