Latestರಾಷ್ಟ್ರೀಯಸುದ್ದಿ

ದೇಶದಲ್ಲಿ ಸತತವಾಗಿ ಏರುತ್ತಿವೆ ಕೋವಿಡ್ ಪ್ರಕರಣಗಳು

ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ವ್ಯಾಪಕ ಪ್ರಮಾಣದಲ್ಲಿ ಹೆಚ್ಚುತ್ತಿದ್ದು 24 ಗಂಟೆಗಳ ಅವಧಿಯಲ್ಲಿ 1. 59, 632ಹೊಸ ಪ್ರಕರಣ ವರದಿಯಾಗಿದೆ. ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇದೇ ವೇಳೆ ಚಿಕಿತ್ಸೆ ಫಲಕಾರಿಯಾದೇ 24 ಗಂಟೆಗಳ ಅವಧಿಯಲ್ಲಿ 328 ರೋಗಿಗಳು ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಸೋಂಕು ಮತ್ತು ಸಾವಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 4. 83 ಲಕ್ಷಕ್ಕೆ ಏರಿಕೆಯಾಗಿದೆ ಎಂದೂ ಇಲಾಖೆಯ ವರದಿ ಹೇಳಿದೆ. ದೈನಂದಿನ ಪ್ರಕರಣಗಳ ಪಾಸಿಟಿವಿಟಿ ದರ ಶೇಕಡ 10.21 ಹೆಚ್ಚಾಗಿದೆ.

ದೇಶಾದ್ಯಂತ ಲಸಿಕಾ ಅಭಿಯಾನದ ಅಂಗವಾಗಿ ಈ ವರೆಗೆ 151 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಮಾಹಿತಿ ನೀಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button