
ನವದೆಹಲಿ: ಕೊರೊನಾ ಸಂದರ್ಭದಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಅಗತ್ಯ ವಸ್ತುಗಳ ಪೂರೈಕೆಯನ್ನು ಖಾತ್ರಿಪಡಿಸಲು ಕೇಂದ್ರ ಸರ್ಕಾರ ಸಹಾಯವಾಣಿ ಹಾಗೂ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ.
ದೂರವಾಣಿ ಸಂಖ್ಯೆ 011 – 2306 3554 ಅಥವಾ 011 – 2306 0625 ಗೆ ಕರೆ ಮಾಡುವ ಮೂಲಕ ಅವುಗಳ ಸೇವೆಯನ್ನು ಪಡೆಯಬಹುದಾಗಿದೆ. ಈ ದೂರವಾಣಿ ಸಂಖ್ಯೆಗಳು ಪ್ರತಿನಿತ್ಯ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಆಮದು ಮತ್ತು ರಫ್ತಿನ ಸ್ಥಿತಿಗತಿ ಹಾಗೂ ವಹಿವಾಟುದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಾಣಿಜ್ಯ ಇಲಾಖೆ ಮತ್ತು ವಿದೇಶಿ ವ್ಯಾಪಾರಗಳ ಮಹಾ ನಿರ್ದೇಶನಾಲಯ-ಡಿಜಿಎಫ್‌ಟಿ ಪರಿಶೀಲನೆ ನಡೆಸಲಿವೆ.
ಸಾಂಕ್ರಾಮಿಕದಿಂದ ಅಂತರಾಷ್ಟ್ರೀಯ ವ್ಯಾಪಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲು ಡಿಜಿಎಫ್‌ಟಿ ಕೊರೊನಾ ಸಹಾಯವಾಣಿ ಆರಂಭಿಸಿದೆ.



