Latestಕಲಬುರ್ಗಿಜಿಲ್ಲಾ ಸುದ್ದಿ

ಕಲಬುರಗಿ: ಏರಿಕೆಯಾಗುತ್ತಿರುವ ಕೊರೊ‌ನಾ‌ ಪ್ರಕರಣ : ಎಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ

ಕಲಬುರಗಿ: ಮೊದಲನೇ, ಎರಡನೇ ಅಲೆಯಲ್ಲಿ ಅಕ್ಷರಶಃ ತತ್ತರಿಸಿರುವ ಬಿಸಿಲೂರು ಕಲಬುರಗಿ ಜಿಲ್ಲೆಯಲ್ಲಿ ಇದೀಗ ಮತ್ತೆ ಕೊರೊನಾ ಸ್ಫೋಟಗೊಳ್ಳುತ್ತಿದೆ. ಕಳೆದೊಂದು ವಾರದಿಂದ ಹೊಸ ಕೊರೊನಾ ಕೇಸ್ ಗಳು ಸಂಖ್ಯೆ ಡಬಲ್ ಆಗ್ತಿದೆ. ಕೋವಿಡ್ ಕೇಸ್ ಏರಿಕೆ ಒಂದೆಡೆಯಾದ್ರೆ ಸೋಂಕಿತರು ಟ್ರಾವೆಲ್ ಹಿಸ್ಟರಿ ನೀಡಲು ಹಿಂದೇಟು ಹಾಕ್ತಿದ್ದು, ಟ್ರಾವೆಲ್ ಹಿಸ್ಟರಿ ಗುರುತಿಸುವುದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ‌.

ಮೊದಲೇ, ಎರಡನೇ ಅಲೆಯಲ್ಲಿ ಹೆಮ್ಮಾರಿ ಆರ್ಭಟಕ್ಕೆ ಕಲಬುರಗಿ ಜನ ಪ್ರಾಣ ಕಳೆದುಕೊಂಡರು ಅಕ್ಷರಶಃ ತತ್ತರಿಸಿಹೋಗಿದ್ರು‌. ಇನ್ನೆನೂ ಕೊರೊನಾ ಕಾಟ ತಪ್ಪಿತು ಎನ್ನುವಷ್ಟರಲ್ಲೇ ಇದೀಗ 2022 ಹೊಸ ವರ್ಷ ಆರಂಭದಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ ಕ್ರಮೇಣ ಏರತೊಡಗಿದೆ. ಕಳೆದ ಒಂದು ವಾರದಲ್ಲಿ ಪ್ರತಿ ದಿನ ಕೊರೊನಾ ಕೇಸ್ ಗಳ ಸಂಖ್ಯೆ ಡಬಲ್ ಆಗುತ್ತ ಆರ್ಭಟಿಸತೊಡಗಿದೆ‌.

ಕಳೆದ ಡಿಸೆಂಬರ್ ಅಂತ್ಯದ ವರೆಗೂ ಜಿಲ್ಲೆಯಲ್ಲಿ ಕೇವಲ 1’2’3 ಕೇಸ್ ಗಳು ಮಾತ್ರ ಪತ್ತೆಯಾಗುತ್ತಿದ್ದವು. ಆದರೆ, ಜನವರಿ 2 ಮತ್ತು 3 ರಂದು ದಿಢೀರನೆ 9 ಕೇಸ್ ಗಳು ಪತ್ತೆಯಾಗಿದ್ದು, 4 ರಂದು ಏಕಾಏಕಿ 16 ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಜನವರಿ 5 ರಂದು 28 ಕೋವಿಡ್ ಹೊಸ ಪ್ರಕರಣಗಳು ಹಾಗೂ ನಿನ್ನೆ ಮತ್ತೆ 25 ಪ್ರಕರಣಗಳು ಪತ್ತೆಯಾಗಿ ದಿನೆ ದಿನೆ ಸೋಂಕಿತರು ದ್ವಿಗುಣಗೊಳ್ಳುತ್ತಿದೆ‌. ಕೊರೊನಾ ಅಬ್ಬರಿಸುತ್ತಿದ್ದಂತೆ ಜಿಲ್ಲೆಯಲ್ಲಿ ಮತ್ತೆ ವಿಷಮ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಶುರುವಾಗಿದೆ.

ಒಂದೆಡೆ ಕೊರೊನಾ ಕೇಸ್ ಗಳ ಸಂಖ್ಯೆ ಹೆಚ್ಚಳವಾಗ್ತಿದ್ರೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚೋದೆ ಬಿಗ್ ಟೆನ್ಛನ್ ಆಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು‌. ಕೋವಿಡ್ ಧೃಡಪಡ್ತಿದ್ದಂತೆ ಸೋಂಕಿತರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ರು‌. ಕೊನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಆಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸೋಂಕಿತರನ್ನ ಪತ್ತೆಹಚ್ಚಿದ್ದಾರೆ‌. ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಸೋಂಕಿತರಿಂದ ಟ್ರಾವೆಲ್ ಹಿಸ್ಟರಿ ಮಾಹಿತಿ ನೀಡಲು ಹಿಂದೇಟು ಹಾಕ್ತಿರೋದು ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ‌. ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳನ್ನು ಕಟ್ಟಿನಿಟ್ಟಾಗಿ ಪಾಲಿಸುವಂತೆ ಕಲಬುರಗಿ ಜನತೆಯಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಹಾವಳಿಯಿಂದ ದುಸ್ಥರ ಪರಿಸ್ಥಿತಿ ಎದುರಿಸಿದ್ದ ಕಲಬುರಗಿಗೆ ಮತ್ತೆ ಡೆಡ್ಲಿ ಕೊರೊನಾ ಕರಿ ಛಾಯೆ ಆವರಿಸಿಕೊಂಡಂತಾಗಿದೆ. ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ ಕೋವಿಡ್ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಬೇಕು.

Spread the love

Related Articles

Leave a Reply

Your email address will not be published. Required fields are marked *

Back to top button