Breaking NewsLatestರಾಜಕೀಯರಾಷ್ಟ್ರೀಯಸುದ್ದಿ
ಮೋದಿ ಸಭೆಯಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್..!!

ಅಮೃತಸರ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಂಜಾಬಿನ ಫಿರೋಜ್ ಪುರ್ ಚುನಾವಣಾ ಸಭೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭಾಗಿಯಾಗುತ್ತಿದ್ದಾರೆ. ರೈತರ ನಿರಂತರ ಪ್ರತಿಭಟನೆಯ ನಂತರ ಕೇಂದ್ರ ಸರ್ಕಾರ ಮೂರು ವಿವಾದಾತ್ಮಕ ಕೃಷಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆದ ನಂತರ ಪ್ರಧಾನಿ ಇದೇ ಮೊದಲ ಬಾರಿಗೆ ಪಂಜಾಬಿ ಗೆ ಭೇಟಿ ನೀಡುತ್ತಿದ್ದಾರೆ.
ಈ ನಡುವೆ ಪ್ರಧಾನಿ ಮೋದಿಯವರ ಫಿರೋಜ್‌ಪುರ್ ರ್ಯಾಲಿಗೆ ಮುಂಚಿತವಾಗಿ, ಪಂಜಾಬ್ ಸರ್ಕಾರ, ಇದೇ 15 ರಂದು ಪ್ರಧಾನಿಯವರನ್ನು ಭೇಟಿಯಾಗಿ ಬಾಕಿ ಇರುವ ಬೇಡಿಕೆಗಳ ಕುರಿತು ಚರ್ಚಿಸುವಂತೆ ರೈತ ಮುಖಂಡರಾದ ಸತ್ನಾಮ್ ಸಿಂಗ್ ಪನ್ನು, ಸವೀಂದರ್ ಸಿಂಗ್ ಚೌತಾಲಾ ಮತ್ತು ಸರ್ವಾನ್ ಸಿಂಗ್ ಪಂಧೇರ್ ಗೆ ಆಹ್ವಾನ ನೀಡಿದೆ.
