Breaking NewsLatestರಾಷ್ಟ್ರೀಯಸುದ್ದಿ

ದೆಹಲಿಯಲ್ಲಿ ಲಾಕ್ ಡೌನ್ ಇಲ್ಲ, ರಾತ್ರಿ ಕರ್ಫ್ಯೂ ಜಾರಿ

ನವದೆಹಲಿ: ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಮಂಗಳವಾರ ಒಂದೇ ದಿನ 5, 500 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಕಾರಣದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ
ಸದ್ಯ ಲಾಕ್ ಡೌನ್ ಜಾರಿ ಇಲ್ಲ, ಕೇವಲ ರಾತ್ರಿ ಕರ್ಫ್ಯೂ ಮಾತ್ರ ಜಾರಿಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಪಾಸಿಟಿವಿಟಿ ದರ 6.4ಕ್ಕೆ ತಲುಪಿದೆ. ಖಾಸಗಿ ಕಚೇರಿಗಳು ಶೇಕಡ 50ರಷ್ಟು ಹಾಜರಾತಿಗೆ ಕೆಲಸ ಮಾಡಬೇಕು ಸರ್ಕಾರಿ ಕಚೇರಿಗಳಲ್ಲಿ ಅಗತ್ಯ ಸೇವೆ ಹೊರತು ಪಡಿಸಿ, ಉಳಿದವರು ಮನೆಯಿಂದಲೇ ಕೆಲಸ ಮಾಡುವಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಸಹ ಸೋಂಕು ಖಚಿತವಾಗಿದ್ದು ಸದ್ಯ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button