Latestಕಲಬುರ್ಗಿಜಿಲ್ಲಾ ಸುದ್ದಿ

ಮನೆ ಮುಂದೆ ವರ್ಷಾಚರಣೆ ವೇಳೆ ಚಾಕು ಇರಿತ: ಚಿಕಿತ್ಸೆ ಫಲಿಸದೆ ಯುವಕ ಸಾವು

ಕಲಬುರಗಿ: ಮನೆಯ ಮುಂದೆ ಹೊಸ ವರ್ಷಾಚರಣೆ ಮಾಡ್ತಿದ್ದ ಯುವಕನಿಗೆ ಚಾಕು ಇರಿತ ಪ್ರಕರಣಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾನೆ.

ಮಲ್ಲಿಕಾರ್ಜುನ ಚಾಕು ಇರಿತಕ್ಕೆ ಒಳಗಾಗಿ ಸಾವನ್ನಪ್ಪಿದ ಯುವಕ. ಭವಾನಿ ನಗರದ ಮನೆಯ ಮುಂದೆ ಹೊಸ ವರ್ಷದ ಮದ್ಯರಾತ್ರಿ ಸೌಂಡ್ ಬಾಕ್ಸ್ ಹಚ್ಚಿ ಡ್ಯಾನ್ಸ್ ಮಾಡ್ತಿದ್ದ ವೇಳೆ ಇದೆ ಬಡಾವಣೆಯ ವಿರೇಶ್ ಮತ್ತು ಆತನ ಸ್ನೇಹಿತರು ಗಲಾಟೆ ಮಾಡಿದ್ದರು. ಸೌಂಡ್ ಬಾಕ್ಸ್ ಆಫ್ ಮಾಡುವಂತೆ ವಾದ ಮಾಡಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ‌. ಮಲ್ಲಿಕಾರ್ಜುನ ಹಾಗೂ ಸ್ನೇಹಿತರು ಸೌಂಡ್ ಬಾಕ್ಸ್ ಆಫ್ ಮಾಡಿ ಕೇಕ್ ಕಟ್ ಮಾಡೋಕೆ ಮುಂದಾದಾಗ ವೀರೇಶ ಹಾಗೂ ಸಹಚರರು ಮಲ್ಲಿಕಾರ್ಜುನ ಮೇಲೆ ಚಾಕು ಇರಿದಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದ ಯುವಕ‌ನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಯುವಕ ಸಾವನ್ನಪ್ಪಿದ್ದಾನೆ. ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button