Latestಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಹುಬ್ಬಳ್ಳಿ: ಹೊಸ ವರ್ಷದ ದಿನವೇ ಅಪಘಾತ : ಓರ್ವ ಸಾವು, ನಾಲ್ವರಿಗೆ ಗಾಯ

ಹುಬ್ಬಳ್ಳಿ: ವೇಗವಾಗಿ ಹೋಗುತ್ತಿದ್ದ ಕಾರೊಂದು (Car) ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರ್‌ನಲ್ಲಿದ್ದ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರಿಗೆ ಗಾಯವಾಗಿರುಬ ಘಟನೆ ಹುಬ್ಬಳ್ಳಿ (Hubballi) ನಗರದ ಹೊರವಲಯದ ರಾಯನಾಳ ಕ್ರಾಸ್ ಬಳಿ ನಡೆದಿದೆ.

ಮೃತ ಯುವಕನನ್ನು (Youth Died)ಹುಬ್ಬಳ್ಳಿ ಮಹಾವೀರಗಲ್ಲಿಯ ಗಣೇಶ ಬಂಡಿ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಒಟ್ಟು ಐದು ಜನರು‌ ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಅದರಲ್ಲಿ ಓರ್ವ ಸಾವನಪ್ಪಿದ್ದು, ಉಳಿದ ನಾಲ್ವರಲ್ಲಿ‌ ಕೆಲವರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ಹಾಗೂ ಪೊಲೀಸರು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಗಾಯಾಳುಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಪೊಲೀಸರ ಪ್ರಾಥಮಿಕ ತನಿಖೆಯ‌ನಂತರವಷ್ಟೇ ಹೆಸರು ತಿಳಿದು ಬರಬೇಕಾಗಿದೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

Spread the love

Related Articles

Leave a Reply

Your email address will not be published. Required fields are marked *

Back to top button