Latestವಿದೇಶಸುದ್ದಿ

ಕ್ಯೂಬಾದ ವಲಸಿಗ ಚಾಲಕನಿಗೆ ಅಮೆರಿಕಾ ಕೋರ್ಟ್ 110 ವರ್ಷಗಳ ಸುದೀರ್ಘ ಶಿಕ್ಷೆ…!!

Long Sentenced ನ್ಯೂಯಾರ್ಕ್: ಅಡ್ಡಾದಿಡ್ಡಿಯಾಗಿ ಲಾರಿ ಚಾಲನೆ ಮಾಡಿ ನಾಲ್ವರು ಅಮಾಯಕರ ಸಾವಿಗೆ ಕಾರಣನಾದ ಕ್ಯಬಾದ ವಲಸಿಗ ಲಾರಿ ಚಾಲಕನಿಗೆ ಅಮೆರಿಕದ ಕೊಲರಾಡೊ ನ್ಯಾಯಾಲಯ (America colorado Court) 110 ವರ್ಷಗಳ ಶಿಕ್ಷೆ ವಿಧಿಸಿದೆ. ಆದರೆ ಈ ತಪ್ಪಿಗೆ ಇಷ್ಟು ವರ್ಷಗಳ ಶಿಕ್ಷೆ ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆಯಾಗಿ ನಂತರ ಅದು ಪ್ರತಿಭಟನೆಯ(After Protest) ಸ್ವರೂಪಕ್ಕೆ ತಿರುಗಿದ ಬಳಿಕ ನ್ಯಾಯಾಲಯ ಬರೋಬ್ಬರಿ ನೂರು ವರ್ಷಗಳ ಶಿಕ್ಷೆ ತೆಗೆದುಹಾಕಿ ಕೇವಲ 10 ವರ್ಷಕ್ಕೆ(10Years Sentenced) ಇಳಿಸಿದೆ. ನ್ಯಾಯಾಂಗ ಇತಿಹಾಸದಲ್ಲಿ ಇದೊಂದು ವಿರಳ ಪ್ರಕರಣ.

ಕ್ಯೂಬಾದ ವಲಸಿಗ ಲಾರಿ ಚಾಲಕ ರೋಜೆಲ್ ಅಗುಲೆರಾ-ಮೆಡೆರೋಸ್(Rozer Agulera Medorose) ಶಿಕ್ಷೆ ಗುರಿಯಾದ ಚಾಲಕ. ನ್ಯಾಯಲಯದ ಈ ತೀರ್ಮಾನವನ್ನು ಕೊಲೊರಾಡೋ ಗವರ್ನರ್ ಜೇರೆಡ್(Colorodo Governer) “ಅನ್ಯಾಯದ ಶಿಕ್ಷೆ ಎಂದು ಕರೆದಿದ್ದಾರೆ.


ಘಟನೆ ನಡೆದಿದ್ದು ಏಪ್ರಿಲ್ 2019 ರಲ್ಲಿ . ಅಗುಲೆರಾ-ಮೆಡೆರೋಸ್ ರಾಕಿ ಪರ್ವತಗಳ ತಪ್ಪಲಿನ ಸಾಲಿನಲ್ಲಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದಾಗ ಇಳಿಜಾರಿನಲ್ಲಿ ಲಾರಿ ಬ್ರೇಕ್ ವಿಫಲವಾಗಿ , ಅಫಘಾತಕ್ಕೀಡಾಗಿ. ನಂತರ ಲಾರಿ ಜ್ವಾಲೆಯಾಗಿ ಸಿಡಿದ ಪರಿಣಾಮ ಅಮಾಯಕರಾದ ಸ್ಟಾನ್ಲಿ ಪೊಲಿಟಾನೊ, 69, ವಿಲಿಯಂ ಬೈಲಿ, 67, ಡಾಯ್ಲ್ ಹ್ಯಾರಿಸನ್, 61, ಮತ್ತು ಮಿಗುಯೆಲ್ ಏಂಜೆಲ್ ಲಾಮಾಸ್ ಅರೆಲಾನೊ, 24 ಸಾವಿಗೆ ಕಾರಣನಾಗಿದ್ದ .

ಬ್ರೇಕ್ ವಿಫಲವಾಗಿ (Break Fail) ನಿಯಂತ್ರಣ ಕಳೆದುಕೊಂಡದರೂ ಇತರ ವಾಹನಗಳನ್ನು ತಪ್ಪಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೆ ಎಂದು ಚಾಲಕ ಅವಲತು ಕೊಂಡಿದ್ದ. ಈ ಶಿಕ್ಷೆಸಾಧುವಲ್ಲಎಂದೂ ಹೇಳಿಕೊಂಡಿದ್ದ.

ನ್ಯಾಯಾಲಯ ಇಷ್ಟು ದೊಡ್ಡ ಸುದಿರ್ಘ ಶಿಕ್ಷೆ ವಿಧಿಸುವುದು ಸರಿಯಾಗುವುದಿಲ್ಲ ಇದನ್ನು ಕಡಿಮೆ ಮಾಡಬೇಕು ಎಂದು ಅನೇಕ ಕಿರುತೆರೆ ನಟರು(Television Artists0 ಸೇರಿದಂತೆ ಸುಮಾರು 50 ಲಕ್ಷ ಜನ ಸಹಿ ಮಾಡಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಕಾರಣ, ನ್ಯಾಯಾಲಯ ಲಾರಿ ಚಾಲಕನಿಗೆ ವಿಧಿಸಿದ್ದ 110 ವರ್ಷಗಳ ಶಿಕ್ಷೆಯನ್ನು ಕೇವಲ 10 ವರ್ಷಗಳಿಗೆ ಇಳಿಸಲಾಗಿದೆ.
ಕಡೆಗೆ ನ್ಯಾಯಾಧೀಶ ಬ್ರೂಸ್ ಜೋನ್ಸ್(Broose Jones) ಹೇಳಿದ್ದು: ಕೊಲೊರಾಡೋ ಕಾನೂನಿನ ಅಡಿಯಲ್ಲಿ ಚಾಲಕನ ತನ್ನ ಅಪರಾಧಗಳಿಗೆ ಕಡ್ಡಾಯವಾಗಿ ಕನಿಷ್ಠ ಶಿಕ್ಷೆ ಅನುಭವಿಸಬೇಕು ಮತ್ತು ಪೂರೈಸಬೇಕು ನಂತರ ಅವನು ಪೆರೋಲ್ ಸಹ ಪಡೆಯಬಹುದು ಎಂದು ಪ್ರಕಟಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button