ಕೊಡಗುಜಿಲ್ಲಾ ಸುದ್ದಿ
ಕೊಡಗು ಜಿಲ್ಲೆಯಾದ್ಯಂತ ಯೋಧ ನಮನಂ ರಥಯಾತ್ರೆ

ಕೊಡಗು : ಇತ್ತಿಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ ಇತರೆ ಯೋಧರಿಗೆ ನಮನ ಸಲ್ಲಿಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆ ಯೂತ್ ವಿಂಗ್ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ‘ಯೋಧ ನಮನಂ ರಥಯಾತ್ರೆ’ಗೆ ಶುಕ್ರವಾರ ಚಾಲನೆ ದೊರೆಯಿತು.
ಜಿಲ್ಲೆಯಾದ್ಯಂತ ಜನವರಿ 4ರವರೆಗೆ ನಡೆಯಲಿರುವ ಶ್ರದ್ಧಾಂಜಲಿ ರಥಾಯಾತ್ರೆಗೆ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಮಡಿಕೇರಿ ನಗರದಲ್ಲಿ ಪ್ರದಕ್ಷಿಣೆ ಬಳಿಕ ಮಡಿಕೇರಿ ತಾಲ್ಲೂಕು ಸೇರಿದಂತೆ, ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಬಳಿಕ ಜನವರಿ 4ರಂದು ಕುಶಾಲನಗರದಲ್ಲಿ ಅಂತ್ಯಗೂಳ್ಳಲಿದೆ.




