ಮತಾಂತರ ನಿಷೇಧ ಕಾಯ್ದೆ ಜಾರಿ: ಶ್ರೀರಾಮ ಸೇನೆ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸ್ವಾಗತ

ಕಲಬುರ್ಗಿ: ರಾಜ್ಯಕ್ಕೆ ಕ್ರಿಶ್ಚಿಯನ್ನರ ಮತಾಂತರ ಪಿಡುಗು ತುಂಬಾನೆ ತೊಂದರೆ ಕೊಡುತ್ತಿತ್ತು ಇದೀಗ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ತಂದಿರುವುದು ತುಂಬಾ ಖುಷಿ ಉಂಟುಮಾಡಿದೆ ಎಂದು ಶ್ರೀರಾಮ ಸೇನೆ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದ್ದಾರೆ.
ಮಾದ್ಯಮದರೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳ ಮತಾಂತರ ನಿಷೇಧ ಕಾಯ್ದೆ ಬೇಡಿಕೆಯಿತ್ತು, ಕರ್ನಾಟಕದ ಎಲ್ಲಾ ಹಿಂದೂಗಳು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ವಿ, ಇದೀಗ ಹೋರಾಟದ ಫಲವಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿರೊಂದು ಸಂತಸ ತಂದಿದೆ. ಮತಾಂತರ ಇದೆ ರೀತಿ ಮುಂದುವರಿದರೆ ದೇಶದ ಹಿಂದೂತ್ವಕ್ಕೆ ಬಹುದೊಡ್ಡ ಪೆಟ್ಟು ಬಿಳುತ್ತೆ. ಬಿಜೆಪಿ ಸರ್ಕಾರ ನಮ್ಮ ನಿರೀಕ್ಷೆಯಂತೆ ಬೆಳಗಾವಿಯಲ್ಲಿ ಐತಿಹಾಸಿಕ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದೆ ಎಂದರು.
ಕಾಂಗ್ರೆಸ್ ವಿರುದ್ದ ಕಿಡಿ
ಕಾಯ್ದೆಯನ್ನ ಸ್ವಾಗತಿಸಬೇಕಾದ ವಿಪಕ್ಷ ವಿರೋಧಿಸುತ್ತಿರುವುದು ವಿಪರ್ಯಾಸ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಸೂದೆ ಪ್ರತಿಯನ್ನು ಸದನದಲ್ಲಿ ಹರಿದುಹಾಕಿದ್ದು ಖಂಡನಾರ್ಹ ಸಂಗತಿಯಾಗಿದೆ. ಇದು ಸದನಕ್ಕೆ ಮಾಡಿದ ಅಪಮಾನ, ನೀವು ಹಿಂದೂತ್ವದಲ್ಲಿ ಹುಟ್ಟಿ ಬೆಳೆದವರು. ಇಟಲಿ ರಾಣಿಯನ್ನು(ಸೋನಿಯ ಗಾಂಧಿ) ಒಲೈಸುವುವ ನಿಮ್ಮ ನಡೆಯಿಂದ ಏನೆನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಟಾಸ್ಕ್ ಫೊರ್ಸ್ ರಚನೆ
ಮತಾಂತರ ನಿಷೇಧ ಜಾರಿಯಾದರು ಸಹ ಸರ್ಕಾರದ ಕಣ್ತಪ್ಪಿಸಿ ಮತಾಂತರ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ಶ್ರೀರಾಮ ಸೇನೆ ವತಿಯಿಂದ ಪ್ರತಿ ಜಿಲ್ಲೆಗೆ ಹತ್ತು ಸೇವಕರ ನೇತೃತ್ವದಲ್ಲಿ ಟಾಸ್ಕ್ ಫೊರ್ಸ್ ರಚನೆ ಮಾಡುತ್ತಿದ್ದೇವೆ. ಮತಾಂತರ ತಡೆಗೆ ಮತ್ತು ಮತಾಂತರ ಆದವರನ್ನ ಮರಳಿ ಕರೆತರಲು ಈ ಟಾಸ್ಕ್ ಫೋರ್ಸ್ ಕಾರ್ಯ ಮಾಡಲಿದೆ ಪೋಲಿಸರು ಸಹಯೋಗದಲ್ಲೆ ಟಾಸ್ಕ್ ಫೊರ್ಸ್ ಕೆಲಸಮಾಡಲಿದೆ. ಅವರು ಅನೈತಿಕ ಮಾರ್ಗ ಹಿಡಿದರೆ, ನಾವು ನೈತಿಕಗಿರಿ ದಾರಿ ಹಿಡಿಯಲೇಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.




