Breaking NewsLatestಬೆಳಗಾವಿರಾಜಕೀಯರಾಜ್ಯ

ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಲಿ: ಡಿಕೆ ಶಿವಕುಮಾರ್

ಬೆಳಗಾವಿ: ಎಂಇಎಸ್ ಪುಂಡಾಟಿಕೆ ಮಾಡುತ್ತಿದೆ ಎಂದು ನಾನು ಹೇಳಲ್ಲ ಆದರೆ,ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವುದೇ ಪಕ್ಷ ಸಂಘಟನೆ ವಿರುದ್ಧ ನಾನು ದೂರುವುದಿಲ್ಲ. ಕಿಡಿಗೇಡಿಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಾಣ್ಮೆಯಿಂದ ಪ್ರತಿಕ್ರಿಸಿದರು.

ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡಿದ್ದೇ ಇದಕ್ಕೆಲ್ಲಾ ಕಾರಣ ಎಂದು ಹೇಳಿದ ಶಿವಕುಮಾರ್,ಇಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ ಎಂದು ದೂರಿದರು.


ಖಾಕಿ ಬಿಟ್ಟು ಕಾವಿ!
ಪೊಲೀಸರು ಖಾಕಿ ಬಿಟ್ಟು ಕಾವಿ ಧರಿಸುತ್ತಿದ್ದಾರೆ.ಪೊಲೀಸರು ರಾಜಕಾರಣಿಗಳ ಮಾತನ್ನು ಬಿಟ್ಟು ಕಾನೂನು ರಿತ್ಯ ತಮ್ಮ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button