ಹುಬ್ಬಳ್ಳಿ - ಧಾರವಾಡ

ಬಿಬಿಎಂಪಿ ಸೂಪರಿಂಟೆಂಡೆಂಟ್ ಇಂಜಿನಿಯರ್ ದುರ್ಮರಣ; ರೈಲ್ವೇ ನಿಲ್ದಾಣದಲ್ಲಿ ಆಯ ತಪ್ಪಿ ಬಿದ್ದು ಸಾವು

ಹುಬ್ಬಳ್ಳಿ: ತಾವು ತೆರಳಬೇಕಾದ ಟ್ರೈನ್ ಬಿಟ್ಟು ಬೇರೊಂದು ರೈಲಿಗೆ ಹತ್ತಿ ಗೊತ್ತಾದ ತಕ್ಷಣ ಇಳಿಯಲು ಮುಂದಾದಾಗ ಆಯ ತಪ್ಪಿ ಬಿದ್ದು, ಬೃಹತ್‌ ಬೆಂಗಳೂರು ಮಾಹಾನಗರ ಪಾಲಿಕೆಯ ಸೂಪರಿಂಟೆಂಡೆಂಟ್ ಇಂಜಿನಿಯರ್ ಒಬ್ಬರು ಸಾವನಪ್ಪಿರುವ ಘಟನೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಡ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕಳೆದ ದಿನ‌ತಡ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿ ರಂಗರಾಜು ಎಸ್ ಎ ಬಿಬಿಎಂಪಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಎಂದು ಗುರುತಿಸಲಾಗಿದೆ. ಕಳೆದ ದಿನ ತಡ ರಾತ್ರಿ ಇವರು ಹುಬ್ಬಳ್ಳಿ ಶ್ರೀ ಸಿದ್ದಾರೂಡ ರೈಲ್ವೇ ನಿಲ್ದಾಣದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಆದರೆ ಹುಬ್ಬಳ್ಳಿ ಬೆಂಗಳೂರು ಟ್ರೈನ್ ಹತ್ತುವ ವೇಳೆ ಗಡಿಬಿಡಿಯಲ್ಲಿ, ಬೆಳಗಾವಿ ರೈಲ್ವೇ ಹತ್ತಿದ್ದಾರೆ. ತಡವಾಗಿ ಇದನ್ನು ಅರಿತು ರಂಗರಾಜುರವರು, ಟ್ರೈನ್‌ನಿಂದ ಇಳಿಯಲು ಮುಂದಾಗಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.‌

ಇನ್ನೂ ಮೃತ ರಂಗರಾಜುರವರು ಬಿಬಿಎಂಪಿಯ ಕೆ ಅರ್ ಐ ಡಿ ಎಲ್‌ನಲ್ಲಿ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.‌

Spread the love

Related Articles

Leave a Reply

Your email address will not be published. Required fields are marked *

Back to top button