Latestರಾಷ್ಟ್ರೀಯಸುದ್ದಿ

ನ್ಯಾಯಮೂರ್ತಿ ಹುದ್ದೆ : ಮಹಿಳಾ ಪ್ರಾತಿನಿಧ್ಯವನ್ನು ಶೇ.50ಕ್ಕೆ ಏರಿಸುವ ಭರವಸೆ ನೀಡಿದ ಸಿಜೆಐ ಎನ್ ವಿ ರಮಣ

ನವದೆಹಲಿ: ನ್ಯಾಯಾಮೂರ್ತಿಗಳ ಹುದ್ದೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಪ್ರಾತಿನಿಧ್ಯ ನೀಡುವ ಪ್ರಕ್ರಿಯೆಯನ್ನು ಹಾಲಿ ಇರುವ ಕೊಲಾಜಿಯಂ ವ್ಯವಸ್ಥೆಯಲ್ಲಿ ಕೈಗೆತ್ತಿಕೊಳ್ಳಲು ಸಹೋದ್ಯೋಗಿಗಳೊಂದಿಗೆ ಚರ್ಚಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಭರವಸೆ ನೀಡಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ಒಟ್ಟು 33 ನ್ಯಾಯಮೂರ್ತಿಗಳ ಪೈಕಿ 4 ಮಹಿಳಾ ನ್ಯಾಯಮೂರ್ತಿಗಳು ಮಾತ್ರವೇ ಇರುವುದು. ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಮಹಿಳೆಯರು ಶೇ.11.5 ಪ್ರಮಾಣದಲ್ಲಿದ್ದಾರೆ. ಹೀಗಾಗಿ ಶೇ.50ರಷ್ಟು ಮಹಿಳಾ ಪ್ರತಿನಿಧ್ಯದ ಬಗ್ಗೆ ಬೇಡಿಕೆಗೆ ಪ್ರತಿಕ್ರಿಯಿಸಿದ ಸಿಜೆಐ, ಹೆಚ್ಚು ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಬೇಕಾದರೆ, ಕಾನೂನು ಪದವಿ ಪಡೆಯುವ ಹುಡುಗಿಯರ ಸಂಖ್ಯೆ ಹೆಚ್ಚಬೇಕು.

ಈ ಕಾರಣದಿಂದಲೇ ದೇಶಾದ್ಯಂತ ಕಾನೂನು ಕಾಲೇಜುಗಳ ಪ್ರವೇಶಕ್ಕೆ ಸಮಾನ ಮಹಿಳಾ ಮೀಸಲಾತಿ ನೀತಿಯನ್ನು ರೂಪಿಸುವಂತೆ ಕಳೆದ ಬಾರಿ ಶಿಫಾರಸು ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button