ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಬಲವಂತವಾಗಿ ಆಸೆ ಆಮಿಷವೊಡ್ಡಿ ಮತಾಂತರ ಮಾಡುವುದು ಕಾನೂನು ವಿರುದ್ಧವಾಗಿದೆ: ಎಂಎಲ್ಸಿ ತಾರಾ ಅನುರಾಧ

ಹುಬ್ಬಳ್ಳಿ: ಯಾರಿಗೇ ಆಗಲಿ ಬಲವಂತವಾಗಿ ಮತಾಂತರ ಮಾಡುವುದು ತಪ್ಪು. ಇತ್ತೀಚೆಗೆ ಆಸೆ ಆಮೇಶವೊಡ್ಡಿ ಮತಾಂತರ ಮಾಡುತ್ತಿರುವುದು ಹೆಚ್ಚಾಗಿದೆ. ಬಡತನವನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುವುದು‌ ಸರಿಯಲ್ಲ. ಆಸೆ ಆಮಿಷವೊಡ್ಡಿ ಮತಾಂತರ ಮಾಡುವುದು ತಪ್ಪು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಹಾಗಾಗಿ ಇಂತಹ‌ ಮತಾಂತರ ಶಿಕ್ಷಗೆ ಅರ್ಹವಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ ಎಂದು ಎಂಎಲ್ಸಿ ತಾರಾ ಅನುರಾಧ ಹೇಳಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಮತಾಂತರ ಅನ್ನೋದು ನಾವು ಹುಟ್ಟಿನಿಂದಲ್ಲೂ ನಡೆಯುತ್ತಲ್ಲೇ ಇದೆ. ನಮ್ಮ ಹುಟ್ಟಿನಿಂದ ಇರುವ ಧರ್ಮವೇ ನಮ್ಮ ಧರ್ಮ ಆಗಿರುತ್ತದೆ. ಆದರೆ ಯಾರದೋ ಬಲವಂತಕ್ಕಾಗಿ, ಅಥವಾ ಎಮೋಷನಲ್ ಬ್ಲಾಕ್​​ಗೆ ಒಳಗಾಗಿ. ಬೇರೆ ಬೇರೆ ಅನುಕೂಲ ಮಾಡೋದಾಗಿ ಆಸೆ ಆಮಿಷ ಒಡ್ಡಿ ಮತಾಂತರ ಮಾಡೋದು ಕಾನೂನು ವಿರುದ್ಧ ವಾಗಿದೆ ಎಂದರು.

ಅಂತಹ ಕೆಲಸಕ್ಕೆ ಯಾರಾದ್ರೂ ಕೈಹಾಕಿದ್ರೆ ಅದು ಶಿಕ್ಷೆಗೆ ಅರ್ಹವಾಗಬೇಕು ಅನ್ನೋದು ನಮ್ಮ ಆಶಯವಾಗಿದೆ. ಎಲ್ಲರಿಗೂ ವೈಯಕ್ತಿಕವಾದ ನಿರ್ಧಾರ ಇರುತ್ತೆ. ಆದರೆ ಯಾರದೋ ಬಲವಂತಕ್ಕೆ ಒಳಗಾಗಬಾರದು ಅನ್ನೋದು ಸರ್ಕಾರದ ಕಾಳಜಿ ಆಗಿದೆ. ಕಾಂಗ್ರೆಸ್ ಪ್ರತಿಭಟನೆ ಮಾಡೋದು ಅವರ ವೈಯಕ್ತಿಕ ವಿಚಾರ. ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಈ ಕಾಯ್ದೆ ಜಾರಿ ಆಗುತ್ತಿದೆ ಎಂದು ತಿಳಿಸಿದರು.

ಯಾವುದೇ ಕುಟುಂಬ ಅಥವಾ ವೈಯಕ್ತಿಕವಾಗಿ ಸರ್ಕಾರ ಕೈಹಾಕಿಲ್ಲ ಈ ವಿಚಾರದಲ್ಲಿ ಎನ್ ಆರ್ ಐ ಗಳ ಕೈವಾಡ ಇದೆ. ಜೊತೆಗೆ ಬೇರೆ ಬೇರೆ ದೇಶಗಳ ಹಣ ಸಹಾಯ ಆಗ್ತಿದೆ ಅನ್ನೋ ಮಾಹಿತಿ ಇವೆ. ಆ ರೀತಿ ಇದ್ದರೂ ಇರಬಹುದು. ಮತಾಂತರ ಅದವರು ಯಾರೇ ಇರಲಿ ಅವರು ಮತ್ತೆ ಅವರ ಧರ್ಮಕ್ಕೆ ಹೋಗೋಕೆ ಸ್ವತಂತ್ರ ಇದೆ ಎನ್ನುವುದರ ಮೂಲಕ ಮತಾಂತರಿಗಳ ವಿರುದ್ಧ ಗಂಭೀರ ಆರೋಪ ಮಾಡಿದರು.‌

Spread the love

Related Articles

Leave a Reply

Your email address will not be published. Required fields are marked *

Back to top button