Latestರಾಷ್ಟ್ರೀಯಸುದ್ದಿ

ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್

ಊಟಿ: ತಮಿಳುನಾಡಿನಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಜನರು ಕಣ್ಣೂರಿನಲ್ಲಿ ಐಎಎಫ್ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 14 ಅಧಿಕಾರಗಳ ಪೈಕಿ ಒಬ್ಬರು ಅಪಘಾತದಿಂದ ಬದುಕುಳಿದಿದ್ದಾರೆ.

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಸೇನಾ ಹೆಲಿಕಾಪ್ಟರ್ ಅಪಘಾತದಿಂದ ಬದುಕುಳಿದಿದ್ದಾರೆ ಮತ್ತು ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವೆಲ್ಲಿಂಗ್ಟನ್​​​ ಸೇಣಾ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ವರುಣ್ ಸಿಂಗ್‌ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕೊಯಮತ್ತೂರಿನಲ್ಲಿ ಅಗತ್ಯ ವ್ಯವಸ್ಥೆಯನ್ನು ತಮಿಳುನಾಡು ಸರ್ಕಾರ ಮಾಡಿದೆ. ಅವರ ಚಿಕಿತ್ಸೆಗಾಗಿಯೇ ಹಿರಿಯ ವೈದ್ಯರನ್ನು ಒಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನ ತೆಗದುಕೊಂಡಿದ್ದಾರೆ. ಈ ಮೂಲಕ ಲಘು ಯುದ್ಧ ವಿಮಾನ ಮತ್ತು ಭಾರತೀಯ ವಾಯುಪಡೆಯ ವೈಭವವನ್ನ ಉಳಿಸಿದರು. ಇನ್ನು ಈ ವರ್ಷದ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ವರುಣ್ ಸಿಂಗ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶೌರ್ಯ ಚಕ್ರ ನೀಡಿ ಗೌರವಿಸಿದರು.

LCA ತೇಜಸ್ ಭಾರತೀಯ ವಾಯುಪಡೆಯ ವಿಮಾನಗಳಲ್ಲಿ ಒಂದಾಗಿದೆ, ಇದು ಇಲ್ಲಿಯವರೆಗೆ ಅಪಘಾತಕ್ಕೆ ಬಲಿಯಾಗಿಲ್ಲ. ಆದಾಗ್ಯೂ, 12 ಅಕ್ಟೋಬರ್ 2020 ರಂದು, LCA ತೇಜಸ್‌ನ ಅಪಾಯದ ಹಂತದಲ್ಲಿತ್ತು. ಆದ್ರೆ, ಈ ದಾಖಲೆಯನ್ನು ಮುರಿಯದಂತೆ ಕಾಪಾಡಿದ ಕೀರ್ತಿ ಗ್ರೂಪ್ ಕಮಾಂಡರ್ ವರುಣ್ ಸಿಂಗ್ ಅವರಿಗೆ ಸಲ್ಲುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button