ಕೊಡಗು

ಮಹಿಳಾ ಪೊಲೀಸ್ ಫೋಟೋ ಕ್ಲಿಕ್ಕಿಸಿ ಪೇಚಿಕೆ ಸಿಲುಕಿದ ಪ್ರವಾಸಿ ಯುವಕರು

ಕೊಡಗು : ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ಫೋಟೋ ಕ್ಲಿಕ್ಕಿಸಿ ಯುವಕರ ಗುಂಪು ಪೇಚಿಗೆ ಸಿಲುಕಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಮೈಸೂರಿನಿಂದ ಪ್ರವಾಸಕ್ಕೆಂದು ಬಂದಿದ್ದ ಕೆಲವು ಯುವಕರು ಹೊಟೇಲ್ ವೊಂದರಲ್ಲಿ ಉಪಹಾರ ಸೇವನೆ ಮಾಡುತ್ತಾ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ಫೋಟೋ ಕ್ಲಿಕ್ಕಿಸಿದ್ದಾರೆ.

ಪ್ರವಾಸಕ್ಕೆಂದು ಬಂದವರು ಪ್ರವಾಸಿತಾಣಗಳನ್ನು ವೀಕ್ಷಿಸಿ ಸಭ್ಯತೆಯಿಂದ ಮರಳುವ ಬದಲು ಮೋಜು, ಮಸ್ತಿಯ ನೆಪದಲ್ಲಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುವ ಪ್ರಕರಣಗಳು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೇ ರೀತಿಯ ಪ್ರಕರಣವೊಂದು ಇಂದು ಮಡಿಕೇರಿ ನಗರದಲ್ಲಿ ನಡೆದಿದ್ದು, ಉಪಹಾರಕ್ಕೆಂದು ಬಂದ ಪ್ರವಾಸಿ ಯುವಕರು ತಿಂಡಿ ತಿಂದು ಸಭ್ಯತೆಯಿಂದ ಮರಳುವ ಬದಲು ಅಲ್ಲೇ ಇದ್ದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರ ಫೋಟೋ ಕ್ಲಿಕ್ಕಿಸಿದ್ದಾರೆ. ಇದು ಸಹಜವಾಗಿಯೇ ಮಹಿಳಾ ಪೊಲೀಸ್ ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯ ಠಾಣಾ ಪೊಲೀಸರು ಪ್ರವಾಸಿ ಯುವಕರನ್ನು ಠಾಣೆಗೆ ಕರೆದೊಯ್ದು ಪೊಲೀಸ್ ಆತಿಥ್ಯ ನೀಡಿ ಬುದ್ದಿಮಾತು ಹೇಳಿದ್ದಾರೆ. ಪ್ರವಾಸಿಗರ ಕುಚೇಷ್ಟೆ ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button