
ಬೆಂಗಳೂರು: ನಿರಂತರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಮರೋಪಾಧಿಯಲ್ಲಿ ಕೆಲಸ ಮಾಡಬೇಕಾ ಹೊತ್ತಲ್ಲಿ ಕೃಷಿ ಸಚಿವರು ಫೋಟೋಶೂಟ್ ನಲ್ಲಿ ಬ್ಯೂಸಿಯಾಗಿರುವ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರದೇಶ ಕಾಂಗ್ರೆಸ್, ಕೃಷಿ ಸಚಿವರಿಗೆ ಫೋಟೋ ಶೂಟ್ ಚಿಂತೆ, ಸರ್ಕಾರಕ್ಕೆ ಶೇ. 40 ರಷ್ಟು ಕಮಿಷನ್ ಚಿಂತೆ ಎಂದು ವ್ಯಂಗ್ಯವಾಡಿದೆ.
ರಾಜ್ಯದ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಗೊಬ್ಬರದ ಕೊರತೆ, ಬೆಲೆ ಏರಿಕೆಯಿಂದ ದುಬಾರಿ ಕೃಷಿ, ಮಳೆಯಿಂದ ಬೆಳೆ ಹಾನಿಯಾಗಿದೆ, ಈಗ ಅಳಿದುಳಿದ ಬೆಳೆಗಳಿಗೆ ರೋಗ ಬಾಧೆ ಎಂದು ಕಾಂಗ್ರೆಸ್ ಹೇಳಿದೆ.



