ಮಾಗಡಿ ಕುದೂರು ಪೊಲೀಸರಿಂದ ನಕಲಿ ಪೊಲೀಸರ ಬಂಧನ

ರಾಮನಗರ: ನಾವು ಪೋಲೀಸರು ಎಂದು ವಾಹನ ನಿಲ್ಲಿಸಿ ನಿಮ್ಮ ಡಿಎಲ್ ಕೊಡಿ, ಇನ್ಸುರೇನ್ಸ್ ಇದೆಯಾ, ಎಂದು ಸಾರ್ವಜನಿಕರನ್ನ ಎದುರಿಸಿ ಹೆದ್ದಾರಿಯಲ್ಲಿ ಹಗಲು ದರೋಡೆ ನಡೆಸುತ್ತಿದ್ದ ನಟೋರಿಯಸ್ ಆರೋಪಿಗಳನ್ನ ಬಂದಿಸಲಾಗಿದೆ.
ಹೆದ್ದಾರಿಯಲ್ಲಿ ವಾಹನಗಳನ್ನ ಅಡ್ಡಗಟ್ಟಿ ನಾವು ಪೊಲೀಸರೆಂದು ಹಣ ಸುಲಿಗೆ ಮಾಡುತ್ತಿದ್ದ ಆರೋಪಿಗಳು ಅಸಲಿ ಪೋಲೀಸರ ಅತಿಥಿಗಳಾಗಿದ್ದಾರೆ.
ರಾಮನಗರ ಜಿಲ್ಲೆಯ ಕುದೂರು ಪೊಲೀಸರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಬೆಂಗಳೂರು ಮೂಲದ ರಾಜೇಶ್(33), ಚೇತನ್(35),ಪುನೀತ್ ಕುಮಾರ್(24)ಶ್ರೀನಿವಾಸ್(24) ಬಂಧಿತ ಆರೋಪಿಗಳಾಗಿದ್ದಾರೆ.
ಈ ನಕಲಿ ಪೋಲೀಸರು ಬಿಡದಿ, ಕುದೂರು ಭಾಗದಲ್ಲಿ ಈ ಗ್ಯಾಂಗ್ ಓಡಾಡುವ ಜನರಿಂದ ನಾವು ಪೊಲೀಸರೆಂದು ಹಣ ವಸೂಲಿ ಮಾಡುತ್ತಿದ್ದರು.
ಈ ಕಳ್ಳರು ಕದ್ದ ಇನೋವಾ ಕಾರಿನಲ್ಲೇ ಕಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದು, ಹೆದ್ದಾರಿಗಳಲ್ಲಿ ಒಬ್ಬೊಂಟಿಯಾಗಿ ಓಡಾಡುವ ಜನರನ್ನ ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ.
ಈ ಗ್ಯಾಂಗ್ ನವರ ನಡೆ ಬಗ್ಗೆ ಅನುಮಾನಗೊಂಡು ಬೆನ್ನು ಹತ್ತಿದ್ದ ಪೊಲೀಸರಿಗೆ ಕುಣಿಗಲ್ ಟೋಲ್ ಬಳಿ ಕಾರು ಪತ್ತೆಯಾಗಿದೆ. ಈ ವೇಳೆ ಟೋಲ್ ಬಳಿ ರಾಜೇಶ್ ಎಂಬಾತನನ್ನ ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಉಳಿದ ಆರೋಪಿಗಳು ಅರೆಸ್ಟ್ ಮಾಡಲಾಗಿದೆ.
ಬಂದಿತ ಆರೋಪಿಗಳ ವಿರುದ್ದ ಬಿಡದಿ ಹಾಗೂ ಪೋಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು ತನಿಖೆ ಮಾಡಲಾಗುತ್ತಿದೆ.




