Breaking NewsLatestಕ್ರಿಕೆಟ್ಕ್ರೀಡೆ

ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಶ್ರೇಯಸ್‌

ಕಾನ್ಪುರ: ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಶತಕ ಸಿಡಿಸುವುದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಗೌರವಯುತ 345 ರನ್‌ ಗಳಿಸಿದೆ.

ಆಡಿದ ಮೊದಲ ಟೆಸ್ಟ್‌ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 17ನೇ ಆಟಗಾರ ಎಂಬ ಹೆಗ್ಗಳಿಕೆಗೆ ಶ್ರೇಯಸ್‌ ಅಯ್ಯರ್‌ ಪಾತ್ರರಾದರು. 171 ಎಸೆತಗಳನ್ನೆದುರಿಸಿದ ಅಯ್ಯರ್‌, 13 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ ಚೊಚ್ಚಲ ಶತಕ ದಾಖಲಿಸಿದರು.

ಮೊದಲ ದಿನದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತದ ಪರ ಆರಂಭಿಕ ಆಟಗಾರ ಶುಭ್ಮನ್‌ ಗಿಲ್‌ (52) ಮತ್ತು ರವೀಂದ್ರ ಜಡೇಜಾ (50) ಗಳಿಸಿದ ಅರ್ಧ ಶತಕ ಭಾರತದ ಗೌರವದ ಮೊತ್ತಕ್ಕೆ ನೆರವಾಯಿತು. ಉಳಿದಂತೆ ಆರಂಭಿಕ ಆಟಗಾರ ಮಯಾಂಕ್‌ ಅಗರ್ವಾಲ್‌, ನಾಯಕ ಅಜಿಂಕ್ಯ ರಹಾನೆ ಕಿವೀಸ್‌ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.

ಕಿವೀಸ್‌ ಪರ ಟಿಮ್‌ ಸೌದೀ (69ಕ್ಕೆ5) ಮತ್ತು ಕೇಲ್‌ ಜಮಿಸನ್‌ (91ಕ್ಕೆ 3) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು. ಇತ್ತೀಚಿನ ವರದಿ ಬಂದಾಗ ನ್ಯೂಜಿಲೆಂಡ್‌ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 36ರನ್‌ ಗಳಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button