ಜಿಲ್ಲಾ ಸುದ್ದಿರಾಮನಗರ
ಮಳೆ ನೀರು ತನ್ನ ಜಮೀನಿಗೆ ಹರಿದಿದ್ದರಿಂದ ಕೆರಳಿದ ಗ್ರಾ.ಪಂ. ಸದಸ್ಯನಿಂದ ಮಹಿಳೆಗೆ ಕಪಾಳ ಮೋಕ್ಷ

ರಾಮನಗರ: ಚನ್ನಪಟ್ಟಣ ತಾಲೂಕನ ಭೂಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಿದ್ದರಾಜು ಪಕ್ಕದ ಜಮೀನಿನ ರೈತನ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗ್ರಾ.ಪಂ. ಸದಸ್ಯನ ಮೇಲೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ.
ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸಿಗನಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದರಾಜು ಅವರು ತನ್ನ ಜಮೀನಿಗೆ ಪಕ್ಕದ ಜಮೀನಿನಿಂದ ನೀರು ಬರುವ ಬಗ್ಗೆ ತಗಾದೆ ತೆಗೆದಿದ್ದಾನೆ.
ಈ ವೇಳೆ ಪಕ್ಕದ ಜಮೀನಿನ ಮಾಲೀಕರ ಪತ್ನಿ ಮತ್ತು ಮಗಳ ಜೊತೆ ಮಾತನಾಡುವ ವೇಳೆ ಗ್ರಾಮ ಪಂಚಾಯತ್ ಸದಸ್ಯ ಸಿದ್ದರಾಜು ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವತಿಯ ಕಪಾಳಕ್ಕೆ ಹೊಡೆದು ಬಳಿಕ ತಲೆಯ ಕೂದಲನ್ನು ಹಿಡಿದು ನೆಲಕ್ಕೆ ಕೆಡವಿ ಕಾಲದಿಂದ ತುಳಿದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ




