ಕೊಡಗುಜಿಲ್ಲಾ ಸುದ್ದಿ

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ : ಎಂ ಪಿ ಕೇಶವ್ ಕಾಮತ್ ಅಧ್ಯಕ್ಷರಾಗಿ ಆಯ್ಕೆ

ಕೊಡಗು : ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ನೂತನ ಅಧ್ಯಕ್ಷರಾಗಿ ಕೊಡಗು ಲೇಖಕರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್‌ ಆಯ್ಕೆಯಾಗಿದ್ದಾರೆ.

ಮರು ಆಯ್ಕೆ ಬಯಸಿದ್ದ ಮಾಜಿ ಅಧ್ಯಕ್ಷ ಲೋಕೇಶ್‌ ಪರಾಭವಗೊಂಡಿದ್ದಾರೆ. ರವಿವಾರ ಏಕಕಾಲಕ್ಕೆ ರಾಜ್ಯಾದ್ಯಂತ ಕಸಾಪ ರಾಜ್ಯ ಘಟಕ ಹಾಗೂ ಎಲ್ಲ ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಯಿತು.

ಮಡಿಕೇರಿ, ವೀರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ ಕೇಂದ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಕೇಶವ ಕಾಮತ್‌ 926 ಮತಗ‌ಳನ್ನು ಪಡೆದು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಲೋಕೇಶ್‌ ಸಾಗರ್‌ 790 ಮತಗಳನ್ನು ಪಡೆದುಕೊಂಡರು

Spread the love

Related Articles

Leave a Reply

Your email address will not be published. Required fields are marked *

Back to top button