ಜಿಲ್ಲಾ ಸುದ್ದಿಮನರಂಜನೆಸಿನಿಮಾಸೆಲೆಬ್ರಿಟಿ
ಅನ್ನಸಂತರ್ಪಣೆ, ಯುವರತ್ನ ಚಿತ್ರ ಪ್ರದರ್ಶನ ಮೂಲಕ ನಟ ಪುನೀತ್ ನಮನ ಕಾರ್ಯಕ್ರಮ

ಬಾಗಲಕೋಟೆ: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಗಲಿಕೆಗೆ ಅಭಿಮಾನಿಗಳು ಅನ್ನಸಂತರ್ಪಣೆ ಜೊತೆಗೆ ಯುವರತ್ನ ಚಿತ್ರವನ್ನು ಪುನಃ ಪ್ರದರ್ಶನ ಮಾಡುವ ಮೂಲಕ ಅರ್ಥಪೂರ್ಣವಾಗಿ ಪುನೀತ್ ನಮನ ಆಚರಿಸಿದರು.
ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಪುನೀತ್ ಅಭಿಮಾನಿಗಳ ಮನವಿ ಮೇರೆಗೆ ಶ್ರೀನಿವಾಸ ಚಿತ್ರಮಂದಿರದಲ್ಲಿ ಯುವರತ್ನ ಚಿತ್ರ ಪುನಃ ಪ್ರದರ್ಶನ ಮಾಡಲಾಯಿತು. ಎಲ್ಲರಿಗೂ ಮೊದಲ ಪ್ರದರ್ಶನ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದರು. ಆ ಬಳಿಕ ನಡೆದ ಪ್ರದರ್ಶನಕ್ಕೆ ಪ್ರತಿ ಪ್ರೇಕ್ಷಕನಿಗೆ ಕೇವಲ 20 ರೂಪಾಯಿಗೆ ಟಿಕೆಟ್ ಕಲ್ಪಿಸಿದ್ದರು.
ಇನ್ನೂ ಸಿನೆಮಾ ನೋಡಲು ಬಂದ ಪ್ರೇಕ್ಷಕರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಅಪ್ಪು ಅಭಿಮಾನಿಗಳು ಅಭಿಮಾನ ಮೆರೆದರು.




