ಜಿಲ್ಲಾ ಸುದ್ದಿದಾವಣಗೆರೆ
ಮೂರು ಕೃಷಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆದದ್ದು ರೈತರ ಹೋರಾಟಕ್ಕೆ ಸಿಕ್ಕ ಜಯ: ತೇಜಸ್ವಿ ಪಟೇಲ್

ದಾವಣಗೆರೆ: ವಿವಾದಿತ ಮೂರು ಕೃಷಿ ಕಾಯ್ದೆ ತಿದ್ದುಪಡಿ ಕಾಯ್ದೆ ವಾಪಸ್ ಪಡೆದ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್, ಇಂದು ರೈತರ ಹೋರಾಟಕ್ಜೆ ಜಯ ಸಿಕ್ಕಿದೆ ಎಂದು ಬಣ್ಣಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಮೂರು ಕಾಯ್ದೆಗಳ ಮಾರಕತೆ ಅರ್ಥವಾಗಿದೆ. ಗಾಂಧಿ ಮಾರ್ಗದಲ್ಲಿ ಅಂಬೇಡ್ಕರ್ ಸಂವಿಧಾನ ಪ್ರತಿನಿಧಿಸಿ ನಡೆದ ಹೋರಾಟಕ್ಕೆ ಜಯ ಸಿಕ್ಕಿದೆ. ಹೋರಾಟದಲ್ಲಿ ಭಾಗವಹಿಸಿದ ರೈತರಿಗೆ ತೇಜಸ್ವಿ ಪಟೇಲ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿಗೆ ರೈತರ ಹೋರಾಟ ಅರ್ಥವಾಗಿದೆ. ಸ್ವಾತಂತ್ರ್ಯ ಇಂತ ಹೋರಾಟ ನಡೆದಿರಲಿಕ್ಕಿಲ್ಲ. ಇದು ಹೋರಾಟಕ್ಕೆ ಪ್ರಧಾನಿಗಳು ನೀಡಿರುವ ಮಾನ್ಯತೆ. ಇದನ್ನ ಗೌರವದಿಂದ ಸ್ವೀಕರಿಸೋಣ. ಹೋರಾಟವನ್ನ ಹಿಂಪಡೆಯಬೇಕು. ಎಂಎಸ್ಪಿ ಹೋರಾಟಕ್ಕೆ ಇನ್ನು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ತೇಜಸ್ವಿ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ.




