Latestಚಿಕ್ಕಮಗಳೂರುಜಿಲ್ಲಾ ಸುದ್ದಿ

ಬಾರ್ ತೆರೆದಿದ್ದಕ್ಕೆ ವಿರೋಧ; ರೊಚ್ಚಿಗೆದ್ದ ಮಹಿಳೆಯರಿಂದ ಬಾರ್ ಧ್ವಂಸ

ಚಿಕ್ಕಮಗಳೂರು: ಬಾರ್ ಬೇಡವೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ ಜಗ್ಗದೆ ಗ್ರಾಮದಲ್ಲಿ ಬಾರ್ ತೆರೆದಿದ್ದಕ್ಕೆ ರೊಚ್ಚಿಗೆದ್ದ ಮಹಿಳೆಯರು ಒಟ್ಟಾಗಿ ಸೇರಿ ಬಾರ್ ಧ್ವಂಸ ಮಾಡಿರುವ ಘಟನೆ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ನಮ್ಮೂರಿಗೆ ಬಾರ್ ಬೇಡ ಎಂದು ಇತ್ತೀಚೆಗೆ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯರು ಪ್ರತಿಭಟನೆಗೆ ಬೆಂಬಲಿಸಿದ್ದರು. ಆದರೆ ಸ್ಥಳೀಯರ ವಿರೋಧದ ನಡುವೆಯೂ ಬಾರ್ ತೆರೆಯಲಾಗಿತ್ತು. ಇದರಿಂದ ರೊಚ್ಚಿಗೆದ್ದ 30ಕ್ಕೂ ಹೆಚ್ಚು ಮಹಿಳೆಯರು ಒಳನುಗ್ಗಿ ಮನಸೋ ಇಚ್ಚೆ ಬಾರ್ ನ ಒಳಗೆ ಇದ್ದ ಕುರ್ಚಿಗಳನ್ನು ಎಸೆದಾಡಿ ಧ್ವಂಸಗೈದಿದ್ದಾರೆ.

ಸ್ಥಳೀಯರ ತೀವ್ರ ವಿರೋಧ ಇದ್ದರೂ ಸಹ ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳು ಮೌನ ವಹಿಸಿ, ಬಾರ್ ತೆರೆಯಲು ಅವಕಾಶ ನೀಡಿದ್ದರು ಎನ್ನಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button