ಕರಾವಳಿ ಸಂಪೂರ್ಣ ದೇಶದ್ರೋಹಿಗಳ ತಾಣವಾಗುತ್ತಿದೆ: ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ

ಕಾರವಾರ : ಜಿಲ್ಲೆಯ ಅಭಿವೃದ್ಧಿಯ ಲಾಭವನ್ನು ದೇಶದ್ರೋಹಿಗಳು ಪಡೆದುಕೊಳ್ಳುತ್ತಾರೆ.ಮಂಗಳೂರು ಸಂಪೂರ್ಣ ನಮ್ಮ ಕೈ ತಪ್ಪಿ ಹೋಗುತ್ತಿದೆ. ಕರಾವಳಿ ಸಂಪೂರ್ಣ ದೇಶದ್ರೋಹಿಗಳ ತಾಣವಾಗುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಹೇಳಿಕೆ ನೀಡಿದ ಅನಂತಕುಮಾರ್ ಹೆಗಡೆ ಅಭಿವೃದ್ಧಿಯ ಹೆಸರಿನಲ್ಲಿ ಮಂಗಳೂರು ತಲೆನೋವಾಗಿದ್ದು,ಮಂಗಳೂರಿನ ಮೂಲ ನಿವಾಸಿಗಳೆಲ್ಲ ಕೇರಳದವರು.ನಮ್ಮ ಊರಿನ ಅಭಿವೃದ್ಧಿ ಲಾಭವನ್ನು ನಾವೇ ಪಡೆದುಕೊಳ್ಳಬೇಕು. ಮಂಗಳೂರಿನ ಅಭಿವೃದ್ಧಿ ಲಾಭವನ್ನು ಕೇರಳದವರು ಪಡೆದುಕೊಳ್ಳುತಿದ್ದಾರೆ. ನಾವು ಬೇರೆಡೆ ಹೋಗಿ ಅಲ್ಪ ಸಂಬಳಕ್ಕೆ ಚಾಕರಿ ಮಾಡುತಿದ್ದೇವೆ ಎಂದರು.
ಇಷ್ಟು ದಿನ ಅಭಿವೃದ್ಧಿ ಬಗ್ಗೆ ಹೇಳುತ್ತಿದ್ದೆವು ಆದರೆ ಆ ದಿಕ್ಕಿನೆಡೆ ದಾಪುಗಾಲು ಹಾಕಿರಲಿಲ್ಲ. ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯೆಡೆ ದಾಪುಗಾಲು ಹಾಕುತ್ತಿದೆ.
ಜಿಲ್ಲೆಯಲ್ಲಿ ಮಂಗಳೂರಿಗಿಂತ ಅತೀ ದೊಡ್ಡ ಪೋರ್ಟ್ ಅನ್ನು ನಿರ್ಮಾಣ ಮಾಡುತಿದ್ದೇವೆ. ಏರ್ಪೋರ್ಟ್ ಬರಲಿದೆ.ಇಲ್ಲಿ ಅಭಿವೃದ್ದಿ ಮಾಡಿಯೇ ನಾನು ಮಿಶ್ರಮಿಸುತ್ತೇನೆ ಎಂದರು




