Breaking NewsLatestರಾಷ್ಟ್ರೀಯ
ಅಡ್ವಾಣಿ ಅವರಿಗೆ ಕೇಕ್ ನೀಡಿ, ಜನ್ಮದಿನದ ಶುಭ ಕೋರಿದ ಸುಷ್ಮಾ ಸ್ವರಾಜ್ ಪುತ್ರಿ

ನವದೆಹಲಿ: 94ನೇ ವರ್ಷಕ್ಕೆ ಕಾಲಿಟ್ಟ ಬಿಜೆಪಿ ಹಿರಿಯ ನಾಯಕ ಎಲ್ಕೆ ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ ಮಾಜಿ ಕೆಂದ್ರ ಸಚಿವೆ ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್, ಅಡ್ವಾಣಿ ಅವರಿಗೆ ಶುಭ ಕೋರಿದರು. ಚಾಕೊಲೇಟ್ ಕೇಕ್ನ್ನೂ ಕೊಂಡೊಯ್ಯುವ ಮೂಲಕ ಅವರು, ತಮ್ಮ ತಾಯಿ ಹಾಕಿದ್ದ ಸಂಪ್ರದಾಯವನ್ನು ವರ್ಷದಂತೆ ಈ ವರ್ಷವೂ ಪಾಲಿಸಿದರು.
ಅಡ್ವಾಣಿ ಅವರನ್ನು ಭೇಟಿಯಾಗಿ ಶುಭ ಕೋರಿದ ಬಳಿಕ ಅವರೊಂದಿಗಿನ ಚಿತ್ರವನ್ನು ಬಾನ್ಸುರಿ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಹಿರಿಯ ನಾಯಕರಾದ ಅಡ್ವಅಣಿ ಅವರಿಗೆ ಅವರ ಹುಟ್ಟಿದ ದಿನದಂದು ಚಾಕೊಲೇಟ್ ಕೇಕ್ ನೀಡುವ ತಮ್ಮ ತಾಯಿಯವರ ಈ ಸಿಹಿ ಸಂಪ್ರದಾಯ ಮುಂದುವರಿದುಕೊಂಡು ಬರುತ್ತಿದೆ ಎಂದು ಅವರು ಹೇಳಿದ್ದಾರೆ.
