Breaking NewsLatestರಾಷ್ಟ್ರೀಯ

ಝೈಡಸ್ ಕ್ಯಾಡಿಲಾ ಸೂಜಿರಹಿತ ಲಸಿಕೆ; 1 ಕೋಟಿ ಡೋಸ್ ಖರೀದಿಸಲಿರುವ ಕೇಂದ್ರ

ನವದೆಹಲಿ: ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಝೈಡಸ್ ಕ್ಯಾಡಿಲಾ ಸೂಜಿರಹಿತ ಕೋವಿಡ್ ಲಸಿಕೆಯನ್ನು ಡೋಸ್​ಗೆ 265 ರೂ. ದರದಲ್ಲಿ ಇ ಕೋಟಿ ಡೋಸ್‌ ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಝೈಡಸ್ ಕ್ಯಾಡಿಲಾದ ಝೈಕೋವ್-ಡಿ ಲಸಿಕೆಯನ್ನು 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ನೀಡಲು ಭಾರತದ ಔಷಧ ನಿಯಂತ್ರಕ ಸಮ್ಮತಿಸಿದೆ.

ವಿಶ್ವದ ಮೊದಲ ಡಿಎನ್‌ಎ ಆಧಾರಿತ ಕೋವಿಡ್ ಲಸಿಕೆ ಇದಾಗಿದ್ದು, ದೇಶದಲ್ಲಿ ವಯಸ್ಕರಿಗೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ.
ಸರ್ಕಾರದ ನಿರಂತರ ಮಾತುಕತೆಗಳ ಬಳಿಕ ಝಯಡಸ್ ಕ್ಯಾಡಿಲಾ, ಈ ಲಸಿಕೆಯನ್ನು ರೂ. 265ಕ್ಕೆ ಒಂದು ಡೋಸ್​ನಂತೆ ನೀಡಲು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಸೂಜಿರಹಿತ ಲಸಿಕೆ ನೀಡಲು ನೋವುರಹಿತ ಜೆಟ್ ಅಪ್ಲಿಕೇಶನ್ ಅಗತ್ಯವಿದ್ದು, ಅದಕ್ಕಾಗಿ ಪ್ರತಿ ಡೋಸ್‌ಗೆ ರೂ. 93ನ್ನು ಹೆಚ್ಚುವರಿಯಾಗಿ ಕೊಡಬೇಕಾಗುತ್ತದೆ. ಬಳಸಿ ಎಸೆಯುಬಹುದಾದ ಈ ನೋವುರಹಿತ ಜೆಟ್ ಅಪ್ಲಿಕೇಶನ್‌ ಬೆಲೆಯೂ ಸೇರಿ ಪ್ರತಿ ಡೋಸ್‌ ಬೆಲೆ ರೂ. 358 ಆಗಲಿದೆ.

ಅಹಮದಾಬಾದ್ ಮೂಲದ ಫಾರ್ಮಾ ಕಂಪನಿಯ ಈ ಹಿಂದೆ ತನ್ನ ಈ ಲಸಿಕೆಯ ಮೂರು ಡೋಸ್​ಗಳಿಗೆ ರೂ. 1,900 ಬೆಲೆ ಎಂದಿತ್ತು ಎನ್ನಲಾಗಿದೆ. ಸರ್ಕಾರದ ಹಲವು ಸುತ್ತಿನ ಮಾತುಕತೆಗಳ ಬಳಿಕ ಕಂಪನಿಯು ಪ್ರತಿ ಡೋಸ್‌ ಬೆಲೆಯನ್ನು ಜೆಟ್ ಅಪ್ಲಿಕೇಟರ್ ಬೆಲೆಯೂ ಸೇರಿ ರೂ. 358ಕ್ಕೆ ಇಳಿಸಿರುವುದಾಗಿ ವರದಿಯಾಗಿದೆ.

ಲಸಿಕೆಯ ಮೂರು ಡೋಸ್​ಗಳನ್ನು 28 ದಿನಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button